ಸುದ್ದಿ ಸಂಕ್ಷಿಪ್ತ

ಮೈಸೂರು ಸಂಸ್ಥಾನ 17 ಮತ್ತು 18ನೇ ಶತಮಾನ : ವಿಚಾರ ಸಂಕಿರಣ ‘ಏ19ಕ್ಕೆ’

‘ಮೈಸೂರು ಸಂಸ್ಥಾನ 17 ಮತ್ತು 18ನೇ ಶತಮಾನ : ‘ ಡಿ.ಎಸ್.ಅಚ್ಚುತರಾವ್ ರವರ ಬರವಣಿಗೆ : ವರ್ತಮಾನದಲ್ಲಿ ಅದರ ಪ್ರಸ್ತುತತೆ’ ವಿಷಯವಾಗಿ ಮಹಾರಾಜ ಕಾಲೇಜಿನಿಂದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಏ.19ರ ಬುಧವಾರ ಬೆಳಿಗ್ಗೆ 10:30ಕ್ಕೆ ಮಹಾರಾಜ ಜೂನಿಯರ್ ಬಿ.ಎ.ಹಾಲ್ ನಲ್ಲಿ ಆಯೋಜಿಸಲಾಗಿದೆ.

ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕೆ.ಸಿ.ಪಿ.ಸುನೀತ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೈಸೂರು ವಿವಿಯ ಇತಿಹಾಸ ವಿಭಾಗದ ಅಧ‍್ಯಕ್ಷ ಪ್ರೊ.ಕೆ.ಸದಾಶಿವ ಕಾರ್ಯಕ್ರಮದ ಅಧ‍್ಯಕ್ಷತೆ ವಹಿಸಲಿದ್ದಾರೆ.

ಗೋಷ್ಠಿಗಳು : ಡಿ.ಎಸ್.ಅಚ್ಚುತರಾವ್ ರವರ ಲೇಖನಗಳು – ಅವುಗಳ ಮಹತ್ವ ಹಾಗೂ ಪ್ರಸ್ತುತತೆ ವಿಷಯವಾಗಿ ಡಾ.ಕೆ.ಸದಾಶಿವ, ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಬಗ್ಗೆ ಡಾ.ಕೆ.ವಿಶ್ವನಾಥ್, ರಕ್ಷಣೆ ಮತ್ತು ನ್ಯಾಯಾಂಗ ವ್ಯವಸ್ಥೆ ವಿಷಯವಾಗಿ ಡಾ.ಗುರುಸಿದ್ಧಯ್ಯ, ಮಹಾರಾಣಿ ಕಾಲೇಜಿನ ಡಾ.ಎಂ.ಎಸ್. ಅನಿತಾ ಸಾಮಾಜಿಕ ಮತ್ತು ಧಾರ್ಮಿಕ ಜೀವನ ವಿಷಯವಾಗಿ ಮಾತನಾಡಲಿದ್ದಾರೆ.

Leave a Reply

comments

Related Articles

error: