ಮೈಸೂರು

ನಿಷೇಧಿತ ಪ್ಲಾಸ್ಟಿಕ್ ಬಳಕೆ : ದಿಢೀರ್ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು

ಮೈಸೂರು,ಫೆ.13:- ನಿಷೇಧಿತ ಪ್ಲಾಸ್ಟಿಕ್ ಕವರ್ ಗಳನ್ನು ಬಳಕೆ ಮಾಡುತ್ತಿದ್ದ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳದ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಹೋಟೆಲ್ ಮೇಲೆ ಪಾಲಿಕೆಯ 9ವಲಯಗಳ ಆರೋಗ್ಯಾಧಿಕಾರಿಗಳು ಏಕಕಾಲಕ್ಕೆ ನಗರದ ವಿವಿಧೆಡೆ ನಿನ್ನೆ ರಾತ್ರಿ ದಾಳಿ ನಡೆಸಿದರು.

ಈ ವೇಳೆ ಒಟ್ಟು ಏಳು ಸಾವಿರ ದಂಡವನ್ನು ವಸೂಲು ಮಾಡಲಾಗಿದೆ. ಇನ್ನಷ್ಟು ಕಟ್ಟುನಿಟ್ಟಿನ ಹಾಗೂ ಅನಿರೀಕ್ಷಿತ ದಾಳಿಗಳನ್ನು ನಡೆಸಲಾಗುವುದು. ಅದಕ್ಕಾಗಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಪಾಲಿಕೆ ಅಧಿಕಾರಿಗಳು ಮಳಿಗೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: