ದೇಶಪ್ರಮುಖ ಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಉಗ್ರನ ಬಂಧನ: ಮೂವರು ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಈತನ ಕೈವಾಡ?  

ಜಮ್ಮು-ಕಾಶ್ಮೀರ,ಫೆ.13- ಲಷ್ಕರ್-ಎ-ತೈಬಾ ಸಂಘಟನೆಗೆ ಸೇರಿದ ಉಗ್ರನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ ಉಗ್ರ ಜಹೂರ್ ಅಹ್ಮದ್ ರಾಥರ್ ನನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಆತನನ್ನು ಕಾಶ್ಮೀರಕ್ಕೆ ಕರೆತರಲಾಗಿದೆ. ಜಹೂರ್ ಅಹ್ಮದ್ ರಾಥರ್ ಅಲಿಯಾಸ್ ಸಾಹಿಲ್ ಅಲಿಯಾಸ್ ಖಾಲಿದ್‌ ಸಾಂಬಾದಲ್ಲಿ ಅಡಗಿ ಕುಳಿತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅನಂತ್ ನಾಗ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕಳೆದ ವರ್ಷ ಕುಲ್ಗಂ ಜಿಲ್ಲೆಯ ವೆಸು ಪ್ರದೇಶದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹತ್ಯೆಯ ಹಿಂದೆ ಈತನ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬಿಜೆಪಿ ಕಾರ್ಯಕರ್ತರನ್ನು ಮಾತ್ರವಲ್ಲದೆ ಕುಲ್ಗಾಮ್‌ನ ಫರ್ರಾ ಪ್ರದೇಶದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಕೊಂದಿರುವ ಶಂಕೆಯೂ ಇದೆ.

2020 ರ ಜನವರಿ 29 ರಂದು ಕುಲ್ಗಾಂನ ವೈ.ಕೆ.ಪೋರಾ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಮೂವರು ಕಾರ್ಯಕರ್ತರಾದ ಫಿಡಾ ಹುಸೇನ್ ಯಾತೂ, ಉಮರ್ ರಶೀದ್ ಬೀಘ್ ಮತ್ತು ಉಮರ್ ರಂಜಾನ್ ಹಜಮ್ ಹತ್ಯೆ ನಡೆದಿತ್ತು. ಕಾರಿನಲ್ಲಿ ಈ ಮೂವರು ಬರುತ್ತಿರುವಾಗ ಇವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಘಟನೆಯನ್ನು ಪ್ರಧಾನಿ ಮೋದಿ ಖಂಡಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: