ಮೈಸೂರು

ರೋಟರಿ ಸಂಬಂಧಿತ ಅರಿವಿನ ರಸಪ್ರಶ್ನೆ : ಎಚ್.ಎಂ ಹರೀಶ್ ಗೆ ಪ್ರಥಮ ಸ್ಥಾನ

ಮೈಸೂರು,ಫೆ.13:-   ರೋಟರಿ ಡಿಸ್ಟ್ರಿಕ್ಟ್ 3181 ವಿಭಾಗದ 15ನೇ ವಾರ್ಷಿಕ ರೋಟರಿ ಸಂಬಂಧಿತ ಅರಿವಿನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಲಯ 8 ರ ರೋಟರಿ ಕ್ಲಬ್ ವಿಜಯನಗರದ ಸಹಾಯಕ ಗವರ್ನರ್  ಎಚ್.ಎಂ ಹರೀಶ್ ಪ್ರಥಮ ಸ್ಥಾನ ಪಡೆದಿದ್ದಾರೆ.

2006-07 ರಿಂದ ಪ್ರತಿವರ್ಷ ಮಂಗಳೂರಿನಲ್ಲಿ ರೋಟರಿ ಡಿಸ್ಟ್ರಿಕ್ಟ್ 3181 ವಿಭಾಗದ ರೋಟರಿ ಸಂಬಂಧಿತ ಬೆಳವಣಿಗೆ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುತ್ತಿದ್ದು ಈ ಬಾರಿ 115 ವರ್ಷ ಇತಿಹಾಸವಿರುವ ರೋಟರಿ ಸಂಸ್ಥೆ ಬಗ್ಗೆ ಆನ್ ಲೈನ್ ಕ್ವಿಜ್ ಸ್ಪರ್ಧೆ ಏರ್ಪಡಿಸಿದ್ದು 9 ವಲಯಗಳ 36 ರೋಟರಿ ಸದಸ್ಯರು ಭಾಗವಹಿಸಿದ್ದರು.

ಮೈಸೂರಿನ ವಿಜಯನಗರ ರೋಟರಿ ಕ್ಲಬ್ ಸಹಾಯಕ ಗವರ್ನರ್ ಎಚ್.ಎಂ ಹರೀಶ್ ಅವರು ಕಳೆದ 4 ವರ್ಷಗಳಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು ಈ ಹಿಂದೆ ದ್ವಿತೀಯ, ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದು ಈ ಬಾರಿ ಮತ್ತೆ ಪ್ರಥಮ ಸ್ಥಾನ ಪಡೆದಿದ್ದಾರೆ, ಇವರ ಈ ಸಾಧನೆಗೆ ವಲಯ 8 ರ ಸಹಾಯಕ ಗವರ್ನರ್ ಬಿ.ರಾಮಾರಾಧ್ಯ, ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಮತ್ತು ಜಿಲ್ಲೆಯ ವಿವಿಧೆಡೆ ರೋಟರಿ ಸದಸ್ಯರು ಸಂತಸ ವ್ಯಕ್ತಪಡಿಸಿ ಶುಭ ಕೋರಿದ್ದಾರೆ.

ರೋಟರಿ ಡಿಸ್ಟ್ರಿಕ್ಟ್ 3181ವಿಭಾಗದ 15ನೇ ವಾರ್ಷಿಕ ರೋಟರಿ ಸಂಬಂಧಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದ ವಲಯ 8 ರ ಸಹಾಯಕ ಗವರ್ನರ್ ಎಚ್.ಎಂ ಹರೀಶ್ ಅವರಿಗೆ ನಿವೃತ್ತ ಗವರ್ನರ್ ಡಾ.ಭಾಸ್ಕರ್ ಪ್ರಶಸ್ತಿ ನೀಡಿದರು, ನಿವೃತ್ತ ಗವರ್ನರ್ ಡಾ.ದೇವದಾಸ್ ರೈ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: