ಲೈಫ್ & ಸ್ಟೈಲ್

ಯುವಕರು ಹ್ಯಾಂಡ್ ಸಮ್ ಆಗಲು ತಪ್ಪದೇ ಸೇವಿಸಿ

ಬಹುಶಃ ಹುಡುಗಿಯರೂ ಅಷ್ಟು ಹೊತ್ತು ಕನ್ನಡಿ ಮುಂದೆ ನಿಂತುಕೊಳ್ಳಲಿಕ್ಕಿಲ್ಲ. ಅಷ್ಟು ಹೊತ್ತು ಯುವಕರು ಇದೀಗ ಕನ್ನಡಿಯ ಮುಂದೆ ನಿಂತು ಕೊಳ್ಳತೊಡಗಿದ್ದಾರೆ. ಯುವಕರಲ್ಲಿನ ಸೌಂದರ್ಯಪ್ರಜ್ಞೆ ಜಾಗೃತಗೊಂಡಿದೆ. ಅವರ ಆಹಾರ ಶೈಲಿಯು ಯುವಕರ ಲುಕ್ಸ್ ನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎನ್ನುತ್ತಾರೆ ಡಯಟಿಶಿಯನ್ ಗಳು. ಆಹಾರದಲ್ಲಿ ಹೆಚ್ಚಿನ ಪ್ರಮಾಣದ ನ್ಯೂಟ್ರಿಆ್ಯಂಟ್ಸ್ ಗಳು ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಸ್ಮಾರ್ಟ್ನೆಸ್ ಹೆಚ್ಚುವುದರೊಂದಿಗೆ ಶರೀರ ಶಕ್ತಿಯುತವಾಗಲಿದೆ. ಹಾಗಾದರೆ ಸುಂದರವಾಗಿ ಕಾಣಲು ಏನನ್ನು ಸೇವಿಸಬೇಕು? ಇಲ್ಲಿದೆ ಸರಳ ಉಪಾಯ.

ಸೇಬು ತಿನ್ನಿ : ಇದರಲ್ಲಿ ಹೇರಳವಾಗಿ ಫಾಯಬರ್ಸ್ ಇರಲಿದೆ. ಪದೇ ಪದೇ ಹಸಿವಾಗುವುದಿಲ್ಲ. ತೂಕ ನಿಯಂತ್ರಣದಲ್ಲಿರುತ್ತದೆ.

ಲಿಂಬು ಶರಬತ್ ಕುಡಿಯಿರಿ: ಇದರಲ್ಲಿ ಸಾಯಿಟ್ರಿಕ್ ಆ್ಯಸಿಡ್ ಇರಲಿದ್ದು ಶರೀರದಲ್ಲಿನ ಕಲ್ಮಶಗಳು ದೂರಗೊಳ್ಳಲಿವೆ. ಮುಖದಲ್ಲಿ ಉಲ್ಲಾಸ ಕಾಣಿಸಲಿದೆ.

ಪಾಲಕ್ ಸೇವಿಸಿ : ಇದರಲ್ಲಿ ಮ್ಯಾಗ್ನಿಶಿಯಂ ಹೇರಳವಾಗಿದ್ದು, ರಕ್ತಸಂಚಾರ ಸರಾಗವಾಗಿ ನಡೆಯಲಿದೆ. ಕಾನ್ಫಿಡೆನ್ಸ್ ಹೆಚ್ಚಲಿದೆ.

ಡಾರ್ಕ್ ಚಾಕಲೇಟ್ ತಿನ್ನಿ : ಇದರಲ್ಲಿ ಫ್ಲೆವೊನಾಯಟ್ಸ್ ಅಂಶವು ಹೇರಳವಾಗಿದ್ದು, ಮೂಡ್ ಒಳ್ಳೆಯದಾಗಿರಲಿದೆ. ಮುಖದ ಅಂದವು ಹೆಚ್ಚಲಿದೆ.

ಟೊಮ್ಯಾಟೋ ಸೇವಿಸಿ : ಇದರಲ್ಲಿ ಲಾಯಿಕೋಪಿನ್ ಹೇರಳವಾಗಿದೆ. ತ್ವಚೆಯ ಹೊಳಪು ಹೆಚ್ಚಲಿದ್ದು. ಹ್ಯಾಂಡ್ ಸಮ್ ಆಗಿ ಕಾಣಿಸಲಿದ್ದೀರಿ.

ಸೋಯಾಬೀನ್ ಸೇವಿಸಿ : ಇದರಲ್ಲಿ ಆಯಿಸೋಫ್ಲೆವಾನ್ಸ್ ಹೇರಳವಾಗಿದ್ದು, ಬಿಳುಪು ಹೆಚ್ಚಲಿದೆ. ಕೂದಲುಗಳು ಗಂಟುಗಟ್ಟಲಾರವು.

ಮೀನು ಸೇವಿಸಿ : ಇದರಲ್ಲಿ ಓಮೇಗಾ 3, ಫೈಟಿ ಆ್ಯಸಿಡ್ಸ್ ಗಳಿದ್ದು ಕೂದಲು ಕಪ್ಪಾಗುವುದಲ್ಲದೇ, ಉದುರುವುದಿಲ್ಲ. ಮಾಂಸಖಂಡಗಳು ಬಲಿಷ್ಠವಾಗುತ್ತವೆ.

ಆಕ್ರೋಟ್ ಸೇವಿಸಿ : ಇದರಲ್ಲಿ ಬಾಯೋಟಿನ್ ಹೇರಳವಾಗಿದ್ದು, ತ್ವಚೆ ಮತ್ತು ಕೂದಲಿನ ಹೊಳಪು ಹೆಚ್ಚಲಿದೆ.

ಬಾಳೆಹಣ್ಣು ತಿನ್ನಿ : ಇದರಲ್ಲಿ ಪೊಟ್ಯಾಶಿಯಮ್ ಹೇರಳವಾಗಿದ್ದು, ಒತ್ತಡ ನಿವಾರಣೆಯಾಗಲಿದೆ. ಮನಸ್ಸು ಪ್ರಶಾಂತವಾಗಿರಲಿದೆ.

ಮೊಟ್ಟೆ ಸೇವಿಸಿ : ಇದರಲ್ಲಿ ಪ್ರೋಟೀನ್ ಹೇರಳವಾಗಿರಲಿದೆ. ಮಾಂಸಖಂಡಗಳು ಬಲಿಷ್ಠವಾಗಲಿವೆ.

ಇವುಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಅಲ್ಪ ಪ್ರಮಾಣದಲ್ಲಿ ಅಳವಡಿಸಿಕೊಂಡಲ್ಲಿ ಹ್ಯಾಂಡ್ ಸಮ್ ಆಗಿ ಕಾಣಿಸುವುದರಲ್ಲಿ ಸಂಶಯವಿಲ್ಲ. (ಎಸ್.ಎಚ್)

Leave a Reply

comments

Related Articles

error: