ಕ್ರೀಡೆಪ್ರಮುಖ ಸುದ್ದಿಮೈಸೂರು
ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಚಿಂತನೆ ಇದೆ : ಸಚಿವ ನಾರಾಯಣ ಗೌಡ
ಮೈಸೂರು, ಫೆ.14:- ಬೆಂಗಳೂರಿನಲ್ಲಿ 1500 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಮೈ ಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಚಿಂತನೆ ಇದೆ ಎಂದು ಸಚಿವ ನಾರಾಯಣ ಗೌಡ ತಿ ಳಿಸಿ ದರು.
ಮೈಸೂರಿನಲ್ಲಿಂದು ಮಾತನಾಡಿದ ಸಚಿವರು
ಬೆಂಗಳೂರನ್ನ ಬಿಟ್ಟರೆ ಮೈಸೂರು ಹುಬ್ಬಳ್ಳಿ ಮುಂಚೂಣಿ ನಗರಗಳು. ಪ್ರತಿ ಜಿಲ್ಲೆಗಳಲ್ಲೂ ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಕೆಲಸ ಆಗಲಿದೆ.
ಪಿಪಿಪಿ ಯೋಜನೆಯಡಿ ಕ್ರೀಡಾಯೋಜನೆಗಳನ್ನ ಕೈಗೆತ್ತಿಕೊಳ್ಳಲಿದ್ದೇವೆ. ಈ ಬಾರಿ ಬಜೆಟ್ ನಲ್ಲಿ ಕ್ರೀಡಾ ಇಲಾಖೆಗೂ ಸಾಕಷ್ಟು ಅನುದಾನ ಸಿಗಲಿದೆ.
ಹಾಸ್ಟೆಲ್ ಗಳು ಸೇರಿದಂತೆ ಕ್ರೀಡಾ ಇಲಾಖಾಯ ಆಮೂಲಾಗ್ರ ಬದಲಾವಣೆಗೆ ಪ್ರಯತ್ನಿಸುತ್ತೇನೆ.
ಮೈಸೂರಿನಲ್ಲಿ ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದರು.