ಮೈಸೂರು

ಕಿಟಕಿಯಲ್ಲಿ ಕೈಹಾಕಿ ಮೊಬೈಲ್ ಕದ್ದಿದ್ದ ಯುವಕನ ಬಂಧನ

ಮೈಸೂರು,ಫೆ.15:- ಮನೆಯೊಂದರ ಕಿಟಕಿಯಿಂದ ಕೈಹಾಕಿ ಮೊಬೈಲ್ಎಗರಿಸಿದ್ದ ಯುವಕನನ್ನು ಬಂಧಿಸುವಲ್ಲಿ ನಗರ ಪೊಲೀಸ್ ರು ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಕೆ.ಜಿ.ಕೊಪ್ಪಲು ನಿವಾಸಿ ಅಕ್ಷಯ್(19) ಎಂದು ಗುರುತಿಸಲಾಗಿದೆ. ಬಂಧಿತನಿಂದ 70ಸಾವಿರ ರೂ.ಮೌಲ್ಯದ ೆರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯು ಡಿಸಿಪಿ ಗೀತ ಪ್ರಸನ್ನ ಮಾರ್ಗದರ್ಶನದಲ್ಲಿ ನಡೆದಿದ್ದು ಇನ್ಸಪೆಕ್ಟರ್ ತಿಮ್ಮರಾಜು, ಸಬ್ ಇನ್ಸಪೆಕ್ಟರ್ ಭವ್ಯಾ, ರಾಚಯ್ಯ, ಸಿಬ್ಬಂದಿಯಾದ ಬಸವರಾಜೇ ಅರಸ್, ರಾಘವೇಂದ್ರ, ಹೆಚ್.ವಿ.ಮಂಜುನಾಥ್, ಮಂಜುನಾಥ್, ಉಮೇಶ್, ಹರೀಶ್ ಕುಮಾರ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: