ಮೈಸೂರು

ಕೊರೋನಾ ಲಾಕ್ ಡೌನ್ : ಹನ್ನೊಂದು ತಿಂಗಳ ಬಳಿಕ ಭಕ್ತರಿಗಾಗಿ ಬಾಗಿಲು ತೆರೆದ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನ

ಮೈಸೂರು, ಫೆ.15:- ದಕ್ಷಿಣ ಕಾಶಿ ನಂಜನಗೂಡಿನ   ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನದ ಬಾಗಿಲು ಕಳೆದ 11 ತಿಂಗಳ ಬಳಿಕ   ತೆರೆದಿದೆ. ಕೋವಿಡ್ ಲಾಕ್ ಡೌನ್ ಘೋಷಣೆಯಾದ ಬಳಿಕ ದಾಸೋಹ ಭವನವನ್ನು ಮುಚ್ಚಲಾಗಿತ್ತು.

2020ರ ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ದೇಶದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ನಂತರ ಹಲವಾರು ನಿರ್ಬಂಧಗಳನ್ನು ವಿಧಿಸಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು.

ಅನೇಕ ದೇವಾಲಯಗಳಲ್ಲಿ ಅನ್ನ ದಾಸೋಹವು ಆರಂಭಗೊಂಡಿರಲಿಲ್ಲ. ಇದೀಗ ಸರ್ಕಾರ ದಾಸೋಹ ಮತ್ತು ಪ್ರಸಾದ್ ವಿತರಣೆಗೆ ಅವಕಾಶ ನೀಡಿದೆ. ಮೈಸೂರು ಸಮೀಪದ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನವೂ ಸಹ 11 ತಿಂಗಳ ಬಳಿಕ ಬಾಗಿಲನ್ನು ತೆರೆದಿದೆ.

ರಾಜ್ಯದ ಎಲ್ಲಾ ದೇವಾಲಯಗಳ ದಾಸೋಹ ಭವನಗಳು ತೆರೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ ಬಳಿಕ ನಂಜುಂಡೇಶ್ವರ ದೇವಾಲಯದ ಸಮೀಪವಿರುವ ದಾಸೋಹ ಭವನ ಭಕ್ತಾದಿಗಳಿಗೆ ಮುಕ್ತವಾಗಿದೆ.

ಬರೋಬ್ಬರಿ 11 ತಿಂಗಳ ಬಳಿಕ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟು ದಿನ ದೇವಾಲಯಕ್ಕೆ ಆಗಮಿಸುತಿದ್ದ ಭಕ್ತರು ಹೋಟೆಲ್‍ ಗಳಿಗೆ ತೆರಳಿ ಹಣ ನೀಡಿ ಊಟ ಮಾಡಬೇಕಾಗಿತ್ತು. ಇದೀಗ ದೇವಾಲಯದಲ್ಲಿಯೇ ಪ್ರಸಾದ ವ್ಯವಸ್ಥೆ ಮತ್ತೆ ಮುಂದುವರೆದಿದೆ. ಇದರಿಂದಾಗಿ ಭಕ್ತರು ಸಹ ಸಂತಸಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: