ಲೈಫ್ & ಸ್ಟೈಲ್

ಸೀಬೆ ಎಲೆ ಕೂದಲುರುವುದನ್ನು ತಡೆಯಬಲ್ಲುದು

ಸುಂದರವಾದ ತಲೆಗೂದನ್ನು ಹೊಂದುವುದು ಎಲ್ಲರಿಗೂ ಇಷ್ಟದ ವಿಷಯವೇ. ಆದರೆ ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ, ಆಹಾರ ಶೈಲಿಯಲ್ಲಿನ ಬದಲಾವಣೆಗಳಿಂದಾಗಿ ತಲೆಗೂದಲು ಉದುರುತ್ತಲೇ ಇರುತ್ತದೆ. ಕೂದಲು ಉದುರುವಿಕೆಯನ್ನು ತಡೆಯಲು ಮನೆಯಲ್ಲಿ ದೊರಕುವ ವಸ್ತುವಿನಿಂದಲೇ ನಾವು ಪ್ರಯತ್ನಿಸಬಹುದು.

ಸೀಬೆ ಹಣ್ಣು ಎಲ್ಲರಿಗೂ ಇಷ್ಟ. ಅದರ ಎಲೆಯಿಂದ ಕೂದಲು ಉದುರುವಿಕೆಯನ್ನು ತಡೆಯಬಹುದೆನ್ನುವ ವಿಷಯ ಕೆಲವರಿಗೆ ತಿಳಿದಿರಲಿಕ್ಕಿಲ್ಲ. ಸೀಬೆ ಗಿಡದಿಂದ ಒಂದು ಮುಷ್ಠಿಯಾಗುವಷ್ಟು ಎಲೆಯನ್ನು ತೆಗೆದು ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಎರಡು ಲೋಟ ನೀರನ್ನು ಹಾಕಿ ಕುದಿಸಬೇಕು. ಕುದಿದ ಬಳಿಕ ಅದನ್ನು ಆರಲು ಬಿಡಬೇಕು. ಆರಿದ ಬಳಿಕ ಕೆಂಬಣ್ಣ ಬಂದ ಆ ನೀರನ್ನು ಕೂದಲಿನ ಬುಡಕ್ಕೆ ಹಾಕಿ ಮಸಾಜ್ ಮಾಡಿ, ಹಾಗೇ ಬಿಟ್ಟು 5ಗಂಟೆಯ ಬಳಿಕ ಕೂದಲನ್ನು ತೊಳೆಯಬೇಕು. ಹೀಗೆ ವಾರಕ್ಕೆರಡು ಬಾರಿಯಾದರೂ ಮಾಡಿದಲ್ಲಿ ಕೂದರುದುವುದು ನಿಲ್ಲುತ್ತದೆ ಮತ್ತು ಹೊಸ ಕೂದಲು ಹುಟ್ಟಲು ಆರಂಭಿಸುತ್ತದೆ.

Leave a Reply

comments

Related Articles

error: