ಮೈಸೂರು

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ನೇಮಿಸಿ ಸರ್ಕಾರದ ಆದೇಶ

ಮೈಸೂರು,ಫೆ.15:- ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ತಕ್ಷಣಕ್ಕೆ ಅಧಿಕಾರ ಸ್ವೀಕರಿಸುವಂತೆ ಆದೇಶಿಸಿದೆ.

ಶನಿವಾರ ವಷ್ಟೇ ಗುರುದತ್ ಹೆಗಡೆ ವರ್ಗಾವಣೆ ಗೊಂಡಿದ್ದರು. ಈ ಜಾಗಕ್ಕೆ ಯಾರನ್ನು ನಿಯೋಜಿಸಿರಲಿಲ್ಲ. ಇದೀಗ ಶಿಲ್ಪಾ ನಾಗ್ ಅವರನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇ- ಗವರ್ನೆನ್ಸ್ ನಿರ್ದೇಶಕರ ಹುದ್ದೆಯಿಂದ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ರ ಹುದ್ದೆಗೆ ವರ್ಗಾಯಿಸಿದೆ.
ಈ ಹಿಂದೆ 2019ರ ಫೆ.17ರಂದು ಶಿಲ್ಪಾ ನಾಗ್ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ನೇಮಕವಾಗಿದ್ದರು. ಅದಕ್ಕೂ ಮುನ್ನ ಮೈಸೂರಿನಲ್ಲೇ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದರು. ( ಕೆ.ಎಸ್,ಎಸ್.ಎಚ್)

Leave a Reply

comments

Related Articles

error: