ದೇಶಪ್ರಮುಖ ಸುದ್ದಿ

ಜಗತ್ತಿನಾದ್ಯಂತ ಪಸರಿಸಿದ ಭಾರತದ ಖ್ಯಾತಿ : 15 ದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಭಾರತೀಯ ಮೂಲದವರು!

ವಿದೇಶ(ವಾಷಿಂಗ್ಟನ್)ಫೆ.16:- ವಿಶ್ವದ ಅನೇಕ ದೇಶಗಳಲ್ಲಿ ಭಾರತದ ಧ್ವಜ ಹಾರಾಡುತ್ತಿದೆ. ಭಾರತೀಯ ಮೂಲದ ಜನರು ಒಟ್ಟು 15 ದೇಶಗಳಲ್ಲಿ ಭಾರತದ ಧ್ವಜವನ್ನು ಹಾರಿಸುತ್ತಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ವಿಶ್ವದ 15 ದೇಶಗಳಲ್ಲಿ ಭಾರತೀಯ ಮೂಲದ 200 ಕ್ಕೂ ಹೆಚ್ಚು ಮಂದಿ ನಾಯಕತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಇನ್ನೂರು ಜನರಲ್ಲಿ 60 ಜನರು ವಿವಿಧ ದೇಶಗಳ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮಾಹಿತಿಯನ್ನು ‘2021 ಇಂಡಿಯಾಸ್ಪೊರಾ ಗವರ್ನ್ಮೆಂಟ್ ಲೀಡ್ಸ್’ನಲ್ಲಿ ನೀಡಲಾಗಿದೆ. ‘2021 ಇಂಡಿಯಾಸ್ಪೊರಾ ಗವರ್ನ್ಮೆಂಟ್ ಲೀಡರ್ಸ್’ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಸರ್ಕಾರಿ ವೆಬ್‌ ಸೈಟ್‌ ಗಳು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಇತರ ಸಂಪನ್ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ, ವಿಶ್ವದ 15 ದೇಶಗಳಲ್ಲಿ ಭಾರತೀಯ ಮೂಲದ 200 ಕ್ಕೂ ಹೆಚ್ಚು ಮಂದಿ ನಾಯಕರು ಸಾರ್ವಜನಿಕ ಸೇವೆಯ ಉನ್ನತ ಶ್ರೇಣಿಯನ್ನು ತಲುಪಿದ್ದಾರೆ ಎಂದು ಹೇಳುತ್ತದೆ. ಈ ಪೈಕಿ 60 ಕ್ಕೂ ಹೆಚ್ಚು ಜನರು ಅನೇಕ ದೇಶಗಳ ಕ್ಯಾಬಿನೆಟ್‌ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘ಇಂಡಿಯಾಸ್ಪೊರಾ’ ಸಂಸ್ಥಾಪಕ, ಕೈಗಾರಿಕೋದ್ಯಮಿ ಮತ್ತು ಹೂಡಿಕೆದಾರ ಎಂ.ಆರ್.ರಂಗಸ್ವಾಮಿ “ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದ ಮೊದಲ ಮಹಿಳೆ ಮತ್ತು ಮೊದಲ ಉಪಾಧ್ಯಕ್ಷರು ಭಾರತೀಯ ಮೂಲದವರಾಗಿದ್ದಾರೆ ಎಂಬುದು ಬಹಳ ಹೆಮ್ಮೆಯ ವಿಷಯವಾಗಿದೆ” ಇದರಲ್ಲಿ ಸಂಸದ ಅಮಿ ಬೇರಾ ಕೂಡ ಸೇರಿದ್ದಾರೆ ಎಂದಿದ್ದಾರೆ.
ಈ ಪಟ್ಟಿಯಲ್ಲಿ ಹೆಸರಿಸಲ್ಪಟ್ಟ ನಂತರ, ಅಮಿ ಬೇರಾ, “2021 ಇಂಡಿಯಾಸ್ಪೊರಾ ಸರ್ಕಾರಿ ನಾಯಕರ ಪಟ್ಟಿಯಲ್ಲಿ ನನ್ನನ್ನು ಸೇರಿಸಿಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ. ಸಂಸತ್ತಿನಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಸಂಸದರಾಗಿ, ಭಾರತೀಯ-ಅಮೇರಿಕನ್ ಸಮುದಾಯದ ನಾಯಕನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಈ ಸಮುದಾಯವು ಅಮೆರಿಕಾದ ಜೀವನ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: