ಮೈಸೂರು

ಬೀದಿ ಶ್ವಾನದ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಆರೋಪ : ಯುವಕನ ಬಂಧನ

ಮೈಸೂರು,ಫೆ.16:-   ಬೀದಿ ಶ್ವಾನವನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಹಾಗೂ  ಪೈಶಾಚಿಕ ಕೃತ್ಯ ಎಸಗಿದ ಆರೋಪದಲ್ಲಿ ಯುವಕನೋರ್ವನನ್ನು ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೋರ್ವ  ಬೀದಿ ಶ್ವಾನವನ್ನು ಕಾಮತೃಷೆಗೆ ಬಳಸಿಕೊಳ್ಳಲು ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಯುವಕನ ವಿರುದ್ಧ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್​ಎ) ಸಂಸ್ಥೆಯ ಪ್ರಾಣಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ. ಬಿ. ಹರೀಶ್ ಅವರು ದೂರು ನೀಡಿದ್ದರು. ದುಷ್ಕೃತ್ಯ ಎಸಗಿರುವ ವಿಕೃತ ಯುವಕನ ವಿರುದ್ಧ ಐಪಿಸಿ ಸೆಕ್ಷನ್​ 1860 (ಯು /ಎಸ್ -377: ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸುವುದು) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಮತ್ತು 1960 ( ಯು/ಇಎಸ್​-11(1)(ಎ)) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋಕುಲಂ 3ನೇ ಹಂತದ ಗಣಪತಿ ದೇವಸ್ಥಾನದ ರಸ್ತೆ ಬಳಿ ಫೆ.11ರ ರಾತ್ರಿ ವೇಳೆ  ಯುವಕನೋರ್ವ ಶ್ವಾನದ ಮೇಲೆ ಕಾಮತೃಷೆಗಾಗಿ   ಕಿರುಕುಳ ನೀಡುವುದನ್ನು ದಾರಿಹೋಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ದುಷ್ಕೃತ್ಯದ ವಿಡಿಯೋವನ್ನು ಈ ಬಳಿಕ ವೈರಲ್ ಮಾಡಿದ್ದರು. ವಿಡಿಯೋದಲ್ಲಿನ ದೃಶ್ಯಗಳನ್ನು ಆಧರಿಸಿ ಪಿಎಫ್​ಎ ಅಧಿಕಾರಿ ಕೆ.ಬಿ. ಹರೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೋ ಆಧರಿಸಿ ಕೃತ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು, ಇಂದು ಕಿರುಕುಳಕ್ಕೆ ಒಳಗಾದ ಶ್ವಾನವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆಯ ನಂತರವಷ್ಟೇ ಶ್ವಾನದ ಮೇಲೆ   ದೌರ್ಜನ್ಯ ಎಸಗಿರುವ ಕುರಿತ ಸತ್ಯಾಸತ್ಯತೆ ತಿಳಿದು ಬರಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: