ಮೈಸೂರು

ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಶಾಸಕ ರಾಮದಾಸ್ ಚಾಲನೆ

ಮೈಸೂರು,ಫೆ.16:- ಗೋಪಾಲಕರ ಸಂಕಷ್ಟಕ್ಕೆ  ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ರಾಮದಾಸ್ ಕೈಜೋಡಿಸಿದ್ದು, ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಚಾಲನೆ  ನೀಡಿದರು.

ಕನಕಗಿರಿಯ ಸೂಯೇಜ್ ಫಾರಂನಲ್ಲಿ ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಶಾಸಕ ರಾಮದಾಸ್ ಇಂದು  ಚಾಲನೆ ನೀಡಿದರು.

ನೀರು ಹರಿಸುವ ಮೂಲಕ  ಗೋವುಗಳಿಗೆ ಹುಲ್ಲು ಬೆಳೆಸಲು ಚಿಂತನೆ ನಡೆಸಲಾಗಿದ್ದು, ಗೋವುಗಳ ರಕ್ಷಣೆ ಹಾಗೂ ಗೋಪಾಲಕರಿಗೆ ಹುಲ್ಲು ಒದಗಿಸುವ ಯೋಜನೆ ಇದಾಗಿದೆ. ಸೂಯೇಜ್ ಫಾರಂ ಸುತ್ತಮುತ್ತಲಿನ  ಪ್ರದೇಶಕ್ಕೆ ಪೈಪ್ ಲೈನ್ ವ್ಯವಸ್ಥೆ ಮೂಲಕ ನೀರು ಹರಿಸಲಾಗುತ್ತದೆ.   ಕನಕಗಿರಿಯ ಸೂಯೇಜ್ ಫಾರಂನಲ್ಲಿ ಗೋವುಗಳ ರಕ್ಷಣೆಗಾಗಿ ಹುಲ್ಲು ಬೆಳೆಸುವ ಯೋಜನೆಗೆ ಶಾಸಕ ರಾಮದಾಸ್  ಚಾಲನೆ ನೀಡಿದರು. ಶಾಸಕರಿಗೆ ಪಾಲಿಕೆ ಸದಸ್ಯರು ಸಾಥ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: