ಕ್ರೀಡೆಪ್ರಮುಖ ಸುದ್ದಿ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

ದೇಶ( ಚೆನ್ನೈ)ಫೆ.17:- ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡವು ಎರಡನೇ ಸ್ಥಾನಕ್ಕೆ ಜಿಗಿದಿದೆ.

ವಿರಾಟ್ ಕೊಹ್ಲಿ ಬಳಗವು ಇಂಗ್ಲೆಂಡ್ ಎದುರು ಜಯಿಸಿದ ನಂತರ ಡಬ್ಲುಟಿಸಿ ಫೈನಲ್ ‌ಗೆ ಮತ್ತಷ್ಟು ಸನಿಹ ಸಾಗಿದೆ. ಶೇಕಡಾವಾರು ಪಾಯಿಂಟ್ಸ್‌ (ಪಿಸಿಟಿ)ನಲ್ಲಿ ಭಾರತವು 69.7 ಅಂಕ ಗಳಿಸಿದೆ. ಒಟ್ಟು 460 ಅಂಕಗಳು ಖಾತೆಯಲ್ಲಿವೆ.

ಶೇ 70 ಪಿಸಿಟಿ ಇರುವ ನ್ಯೂಜಿಲೆಂಡ್ ಈಗಾಗಲೇ ಫೈನಲ್ ಅರ್ಹತೆ ಗಿಟ್ಟಿಸಿದೆ. ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದರಲ್ಲಿ ಜಯಿಸಬೇಕು. ಯಾವ ಪಂದ್ಯವನ್ನೂ ಸೋಲಬಾರದು. ಆಗ ಫೈನಲ್ ದಾರಿಯು ಸುಗಮವಾಗಲಿದೆ.

ಚೆನ್ನೈನಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. ಆಗ ಎರಡನೇ ಸ್ಥಾನಕ್ಕೆ ಜಿಗಿದಿದ್ದ ಇಂಗ್ಲೆಂಡ್ (ಶೇ 67.0) ಮತ್ತೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ (69.2) ಮೂರನೇ ಸ್ಥಾನದಲ್ಲಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: