ಪ್ರಮುಖ ಸುದ್ದಿಮೈಸೂರು

ಪಾಲಿಕೆಯ ಆಯುಕ್ತರಾಗಿದ್ದ ಗುರುದತ್ ಹೆಗಡೆ ಹೆಸರಿನಲ್ಲಿ ನಕಲಿ ಎಫ್ ಬಿ ಖಾತೆ; ಸೈಬರ್ ಕ್ರೈಂ ಪೊಲೀಸ್ ಗೆ ದೂರು

ಮೈಸೂರು/ಬೆಂಗಳೂರು,ಫೆ.17:- ಮೈಸೂರು ನಗರ ಪಾಲಿಕೆಯ ಆಯುಕ್ತರಾಗಿದ್ದು ಇತ್ತೀಚೆಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿರುವ   ಗುರುದತ್ ಹೆಗಡೆ ಅವರ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ತೆರೆದು ವಂಛಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಸ್ನೇಹಿತರ ಬಳಿ ಹಣ ಕೇಳೀರುವುದಾಗಿ ಖುದ್ದು ಗುರುದತ್ ಹೆಗಡೆ ಅವರೇ ತಿಳಿಸಿದ್ದು, Gurudatta Hegde Ias Commissioner Mysuru City Corporation, Mysuru  ಹೆಸರಿನಲ್ಲಿನಕಲಿ ಖಾತೆಯನ್ನು ತೆರೆದಿದ್ದು ಜನರಿಂದ ಹಣ ಕೇಳುತ್ತಿದ್ದಾನೆ. ದಯವಿಟ್ಟು ಯಾರೂ ಇದನ್ನು ನಂಬಬೇಡಿ. ನಾನು ಫೇಸ್ ಬುಕ್ ಖಾತೆಯನ್ನೇ ಹೊಂದಿಲ್ಲ. ನಕಲಿ ಖಾತೆ ಕುರಿತಂತೆ ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೂ ದೂರು ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: