
ದೇಶಪ್ರಮುಖ ಸುದ್ದಿ
ಮುಂಬೈನ ಆಭರಣ ಅಂಗಡಿಯಿಂದ 2.22 ಕೋಟಿ ರೂ.ಮೌಲ್ಯದ ಆಭರಣ ಕಳುವು : ಡಿವಿಆರ್ ಕದ್ದು ಪರಾರಿಯಾದ ಖದೀಮರು
ದೇಶ(ಮುಂಬೈ)ಫೆ.17:- ಮುಂಬೈನ ಕಾಲಾಚೌಕಿ ಪ್ರದೇಶದಲ್ಲಿ ಇರುವ ಆಭರಣ ಅಂಗಡಿಯಲ್ಲಿ ನಡೆದ ಬೃಹತ್ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಸೋಮವಾರ ರಾತ್ರಿ ಕಳ್ಳರು ಆಭರಣ ಅಂಗಡಿಯಿಂದ ಎರಡು ಕೋಟಿ 22 ಲಕ್ಷ ರೂ.ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಆಭರಣಗಳಲ್ಲಿ ಐದಾರು ಕೆಜಿಗಿಂತ ಹೆಚ್ಚು ಚಿನ್ನ ಮತ್ತು 9 ಕೆಜಿ ಬೆಳ್ಳಿ ಆಭರಣಗಳಿತ್ತು ಎನ್ನಲಾಗಿದೆ.
ಮಾಹಿತಿಯ ಪ್ರಕಾರ ಕಳ್ಳರು ತಡರಾತ್ರಿ ಅಂಗಡಿಗೆ ನುಗ್ಗಿ ಒಳಗೆ ಪ್ರವೇಶಿಸಿದ್ದು, ಅಂಗಡಿಯಲ್ಲಿದ್ದ ಎರಡು ಕೋಟಿಗೂ ಅಧಿಕ ಆಭರಣಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಪರಾರಿಯಾಗುವು ಮುನ್ನ ಕಳ್ಳರು ಡಿವಿಆರ್ ನ್ನು ಸಹ ಕದ್ದಿದ್ದಾರೆ. ಈ ಘಟನೆ ಫೆಬ್ರವರಿ 15 ರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)