ಸುದ್ದಿ ಸಂಕ್ಷಿಪ್ತ

ಪಠ್ಯೇತರ ಚಟುವಟಿಕೆಗಳ ಸಮಾರೋಪ : ಏ.19ಕ್ಕೆ

ಮೈಸೂರು ವಿವಿಯ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ-2016-17  .ಏ.19ರಂದು ಸಂಜೆ 6ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಹೆಗ್ಗಡದೇವನ ಕೋಟೆಯ ಜಾನಪದ ಗಾಯಕ ಚಿನ್ನಿಮಾದು ಮಲಾರ ಕಾಲೋನಿ, ಮೈಸೂರು ವಿವಿಯ ಕಾರ್ಯಪಾಲಕ ಅಭಿಯಂತರ ಹೆಚ್.ಕಿಶೋರ ಚಂದ್ರ, ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್ ಹಾಗೂ ಇತರರು ಭಾಗವಹಿಸುವರು.

Leave a Reply

comments

Related Articles

error: