ಮೈಸೂರು

ಮುಂದುವರಿದ ಕಾಡಾನೆ ದಾಳಿ; ಬೆಳೆ ನಾಶ; ರೈತರು ಕಂಗಾಲು

ಮೈಸೂರು,ಫೆ.18:-   ಮೈಸೂರು ಜಿಲ್ಲೆಯಲ್ಲಿ   ಕಾಡಾನೆ ದಾಳಿ ಮುಂದುವರಿದ್ದು, ರೈತರು ಕಂಗಾಲಾಗಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಾಳೇತಿಮ್ಮನಹಳ್ಳಿ ಗ್ರಾಮದಲ್ಲಿ ರೈತರ ಜಮೀನಿಗೆ ನುಗ್ಗಿದ ಕಾಡಾನೆ ದಾಂಧಲೆ ನಡೆಸಿದೆ.

ರೈತ ಮಹಿಳೆ  ಸೀತಮ್ಮ ಅವರ ಜಮೀನಿಗೆ ನುಗ್ಗಿದ ಕಾಡಾನೆ ಬೆಳೆಯನ್ನು ಸಂಪೂರ್ಣ   ನಾಶಪಡಿಸಿದೆ.  ಆನೆದಾಳಿಯಿಂದ ಮೂರು ಎಕರೆ ಬಾಳೆ, ಎರಡು ಎಕರೆ ಗೆಣಸು, 200 ತೆಂಗಿನ ಮರ, 200 ಅಡಿಕೆ ಮರ ನಾಶವಾಗಿದ್ದು, ಸುಮಾರು 15 ಲಕ್ಷ ರೂ.ನಷ್ಟು ಬೆಳೆ ನಾಶವಾಗಿದೆ.  ಪ್ರತಿ ಬಾರಿಯೂ ಆನೆಗಳು ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿರುವ ಕುರಿತು  ರೈತರು ಬೇಸತ್ತಿದ್ದಾರೆ.  ಮುತ್ತೂರು ಅರಣ್ಯ ವಲಯದಿಂದ   ಆನೆಗಳು ಬರುತ್ತಿದ್ದು, ಆ ಭಾಗದಲ್ಲಿ ತಡೆಗೋಡೆ ಸಮರ್ಪಕವಾಗಿಲ್ಲ. ಅದನ್ನು ದುರಸ್ತಿ ಮಾಡುವಂತೆ ರೈತರು ಮನವಿ ಮಾಡಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: