ಮೈಸೂರು

112 ವಾಹನಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯುಕ್ತರ ಪ್ರಶಂಸೆ

ಮೈಸೂರು,ಫೆ.18:- ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತುಸ್ಪಂದನ ನಮ್ಮ-112 ವಾಹನಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಆಯುಕ್ತರು ಪ್ರಶಂಶಿಸಿರುತ್ತಾರೆ.
ಮೈಸೂರು ನಗರದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಮತ್ತು
ಸಾರ್ವಜನಿಕರ ಕರೆಗೆ ತುರ್ತಾಗಿ ಸ್ಪಂದಿಸುವ ಸಲುವಾಗಿ ಪೊಲೀಸ್ ಆಯುಕ್ತರವರು
ಇತ್ತೀಚೆಗೆ 20 ತುರ್ತು ಸ್ಪಂದನ ವಾಹನಗಳಿಗೆ ಚಾಲನೆ ನೀಡಿದ್ದು, ಸಾರ್ವಜನಿಕರು
112 ಗೆ ನೀಡಿದ ದೂರುಗಳಿಗೆ ಉತ್ತಮ ತುರ್ತು ಸ್ಪಂದನೆ ಮತ್ತು ಕರ್ತವ್ಯ ಪ್ರಜೆ ತೋರಿದ, ತುರ್ತು ಸ್ಪಂದನ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸಿದ ಬಸವರಾಜ ಅರಸ್, ಎಎಸ್‍ಐ ಮೋಹನ ಕುಮಾರ್
ಎಎಸ್‍ಐ ರಮೇಶ, ಎಎಸ್‍ಐ ಕೃಷ್ಣ, ಸಿಹೆಚ್‍ಸಿ-282 ವರದರಾಜು, ಸಿಹೆಚ್‍ಸಿ-
436 ರಾಜೇಂದ್ರ ಪ್ರಕಾಶ್, ಸಿಹೆಚ್‍ಸಿ-517 ಚಿಕ್ಕಬಸವೇಗೌಡ ಸಿಹೆಚ್‍ಸಿ-393
ಕೀರ್ತಿ ಎಹೆಚ್‍ಸಿ-13 ಯುವರಾಜ ಎಪಿಸಿ-145 ನರಸಿಂಹ ಎಪಿಸಿ-13
ಅವರುಗಳಿಗೆ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿ
ಪ್ರೋತ್ಸಾಹಿಸಿದರು.
ಮೈಸೂರು ನಗರದ ನಾಗರೀಕರು ತುರ್ತು ಸಂದರ್ಭಗಳಲ್ಲಿ ಮತ್ತು ಪೊಲೀಸ್ ಸಹಾಯಕ್ಕಾಗಿ ನಮ್ಮ-112 ಸಹಾಯವಾಣಿಗೆ ಫೆ.14 ರಿಂದ ಇಲ್ಲಿಯವರೆಗೆ 2603 ದೂರುಗಳನ್ನು ನೀಡಿದ್ದು, ಸರಾಸರಿ 10 ನಿಮಿಷದಲ್ಲಿ ತುರ್ತು ಸ್ಪಂದನ ವಾಹನಗಳು ಕರೆದಾರರು ಮಾಹಿತಿ ನೀಡಿದ ಸ್ಥಳಕ್ಕೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಿರುತ್ತಾರೆ. ಆದ್ದರಿಂದ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ಪೊಲೀಸ್
ಸಹಾಯಕ್ಕಾಗಿ 112 ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ನಮ್ಮ-112 ವ್ಯವಸ್ಥೆಯ ಸದುಪಯೋಗ ಪಡೆಯಲು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: