
ಕ್ರೀಡೆಪ್ರಮುಖ ಸುದ್ದಿವಿದೇಶ
ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಒಸಾಕಾ-ಬ್ರಾಡಿ ಮುಖಾಮುಖಿ
ವಿದೇಶ( ಮೆಲ್ಬರ್ನ್)ಫೆ.19:- ಸೆರೆನಾ ವಿಲಿಯಮ್ಸ್ ಅವರ “ದಾಖಲೆ ಸರಿದೂಗಿಸುವ’ 24ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಕನಸು “ಮೆಲ್ಬರ್ನ್ ಪಾರ್ಕ್’ನಲ್ಲಿ ಭಗ್ನಗೊಂಡಿದೆ.
ಸೆಮಿಫೈನಲ್ ಸೆಣಸಾಟದಲ್ಲಿ ಜಪಾನಿನ ನವೋಮಿ ಒಸಾಕಾ ಅಮೆರಿಕದ ದೈತ್ಯ ಆಟಗಾರ್ತಿಯನ್ನು ನೇರ ಸೆಟ್ಗಳಲ್ಲಿ ಕೆಡವಿ ಪರಾಕ್ರಮ ಮೆರೆದಿದ್ದಾರೆ.
ಸೆರೆನಾ ನಿರ್ಗಮನದಿಂದ ಅಮೆರಿಕದ ಟೆನಿಸ್ ಅಭಿಮಾನಿಗಳಿಗೇನೂ ನಿರಾಸೆಯಾಗಲಿಲ್ಲ. ಅಮೆರಿಕದವರೇ ಆದ, ನಂ. 22 ಆಟಗಾರ್ತಿ ಜೆನ್ನಿಫರ್ ಬ್ರಾಡಿ ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಫೈನಲ್ ಗೆ ಲಗ್ಗೆ ಹಾಕಿದ್ದಾರೆ. ಇವರು ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಕ್ಸೋವಾ ಆಟವನ್ನು 3 ಸೆಟ್ ಗಳಲ್ಲಿ ಮುಗಿಸಿದರು. ಶನಿವಾರ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಒಸಾಕಾ-ಬ್ರಾಡಿ ಮುಖಾಮುಖಿ ಆಗಲಿದ್ದಾರೆ.(ಏಜೆನ್ಸೀಸ್,ಎಸ್.ಎಚ್)