ಮೈಸೂರು

ಉದ್ಯೋಗ ಮೇಳಕ್ಕೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ

ಮೈಸೂರು,ಫೆ.19:- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕೌಶಲ್ಯಭಿವೃದ್ಧಿ ಇಲಾಖೆ ಮತ್ತು ಕಾರ್ಮಿಕ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವಸ್ತುಪ್ರರ್ದಶನದ ಆವರಣದಲ್ಲಿ ಉದ್ಯೋಗ ಮೇಳಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಮಿಕ ಸಚಿವರಾದ ಶಿವರಾಮ್ ಹೆಬ್ಬಾರ್ ಅವರು ದೀಪಬೆಳಗುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್ ಎ ರಾಮ್ ದಾಸ್ ಇಡೀ ವಿಶ್ವವೇ ಕೊರೋನಾದಿಂದ ತಲ್ಲಣಿಸಿದೆ. ಜನರ  ಜೀವನ  ತತ್ತರಿಸಿದೆ. ಇದರ ನಡುವೆ ಹಲವಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರಿಗೆ ಈ ಮೇಳ ಅನುಕೂಲವಾಗಲಿದೆ.   150ಕಂಪನಿಗಳು ಭಾಗವಹಿಸಿದ್ದು, ಪಾಲ್ಗೊಂಡ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ,ಮೂಡ ಅಧ್ಯಕ್ಷ ಹೆಚ್.ವಿ.ರಾಜೀವ್ ,ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ    ಮತ್ತಿತರರು ಪಾಲ್ಗೊಂಡಿದ್ದರು.

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಾದ ಎಕ್ಸೆಲ್ ಸಾಫ್ಟ್, ತಿಯರಮ್ಸ್, ದೊಡ್ಡ ಕೈಗಾರಿಕೋದ್ಯಮಗಳ ಪೈಕಿ ಪ್ರಮುಖವಾಗಿ ಬೆಮಲ್, ಜೆ.ಕೆ ಫ್ಯಾಕ್ಟರಿ, ರಾಣೆ ಮಡ್ರಾಸ್, ದುರ್ಗಾ ಸಲ್ಯೂಷನ್, ಗ್ರಾಸ್ ರೂಟ್ಸ್, ಆದಿತ್ಯಾ ಬಿರ್ಲಾ, ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳಾದ ನೆಸ್ಲೆ, ಜುಬಿಲಿಯಂಟ್, (ಯು.ಬಿ)ಯುನೈಟೆಡ್ ಬ್ರಿವರೀಸ್, ಏಷಿಯನ್ ಪೈಂಟ್ಸ್, ರಂಗ ರಾವ್ ಅಂಡ್ ಸನ್ಸ್, ಎ.ಬಿ.ಬಿ ಇಂಡಿಯಾ ಲಿ., ವಿಕೆಸಿ, ಬಕಾರ್ಡಿ, ಐ.ಟಿ.ಸಿ,  ಎಫ್.ಐ ಡಿ.ಸಿ ಸಲ್ಯೂಷನ್, ಬಿಲ್ಡರ್ಸ್ ಅಸೋಸಿಯೇಷನ್ ನ ಕ್ರೆಡಾಯ್ ಸಂಸ್ಥೆಯ ಜಿ.ಎಸ್.ಎಸ್. ಸಂಸ್ಥೆ ಸೇರಿದಂತೆ ಹಲವರು ಸಂಸ್ಥೆಗಳು ಭಾಗವಹಿಸಿವೆ. ಎಸ್ಎಸ್ಎಲ್ಸಿ ಪಾಸು/ಫೇಲು, ಪಿಯುಸಿ, ಬಿ.ಎ. ಬಿಕಾಂ, ಬಿ.ಎಸ್.ಸಿ, ಎಂಕಾಂ. ಎಂ.ಎಸ್.ಸಿ, ಐ.ಟಿ.ಐ, ಡಿಪ್ಲೊಮಾ, ಜೆ.ಒ.ಸಿ, ಇಂಜಿನಿಯರಿಂಗ್, ಎಂ.ಟೆಕ್ ಎಂಬಿಎ, ನರ್ಸಿಂಗ್, ಹೀಗೆ ವಿವಿಧ ಕ್ಷೇತ್ರದ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: