ಕರ್ನಾಟಕ

ಪೋಷಕರ ಎದುರೇ ಯುವತಿಗೆ ಲೈಂಗಿಕ ಕಿರುಕುಳ : ಕಾಮುಕನ ಬಂಧನ

ಬೆಂಗಳೂರು:  ಪೋಷಕರ ಎದುರೇ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನೋರ್ವನನ್ನು   ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು  ಮಹಮ್ಮದ್ ಸಲೀಂ(40) ಎಂದು ಗುರುತಿಸಲಾಗಿದೆ.  ಬೆಂಗಳೂರಿನ ಯುವತಿ ತನ್ನ ಪೋಷಕರ ಜೊತೆ ಹೈದರಾಬಾದ್‍ಗೆ ಪ್ರವಾಸಕ್ಕೆ ತೆರಳಿದ್ದಳು. ಅಂತೆಯೇ ಅಲ್ಲಿ ಆಕೆ ಟ್ರಾವೆಲ್ ಏಜೆಂಟ್ ಮೂಲಕ ಕ್ಯಾಬ್ ಬುಕ್ ಮಾಡಿದ್ದಳು. ಈ ವೇಳೆ ಕ್ಯಾಬ್ ಚಾಲಕ ಅಪ್ಪ ಅಮ್ಮ- ಬಂಧುಗಳ ಸಮ್ಮುಖದಲ್ಲೇ ಯುವತಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಕಡೆಯವರು ದಾರಿ ಮಧ್ಯೆ ಕಾರ್ ನಿಲ್ಲಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇತ್ತ ಬೆಂಗಳೂರು ಸೇರಲು ರೈಲು ತಪ್ಪಿ ಹೋಗಲಿದೆ ಎಂದು ಯುವತಿ ತನ್ನ ಪೋಷಕರೊಂದಿಗೆ ಬೆಂಗಳೂರಿಗೆ ಮರಳಿದ್ದಾಳೆ. ಬಳಿಕ ವಾಟ್ಸಾಪ್ ಮೂಲಕ ಹೈದರಾಬಾದ್ ಪೊಲೀಸ್ ವೆಬ್ ಸೈಟ್ ಷೀ-ಟೀಮ್‍ಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.ಯುವತಿಯ ವಾಟ್ಸಾಪ್ ದೂರಿಗೆ ಸ್ಪಂದಿಸಿದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: