ಮನರಂಜನೆ

ಕಬಿನಿ, ನಾಗರಹೊಳೆಗೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಸವಿದ ನಟಿ ಜೂಹಿ ಚಾವ್ಲಾ

ಮೈಸೂರು,ಫೆ.20-ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಇತ್ತೀಚೆಗೆ ಕುಟುಂಬಸ್ಥರೊಂದಿಗೆ ಕಬಿನಿ, ನಾಗರಹೊಳೆಯಲ್ಲಿ ಸುಂದರ ಸಮಯವನ್ನು ಕಳೆದಿದ್ದಾರೆ.

ಈ ಬಗ್ಗೆ ಸ್ವತಃ ಜೂಹಿ ಚಾವ್ಲಾ ಅವರೇ ಸಾಮಾಜಿಕ ಜಾಲತಾಣಗಳಾದ ಟ್ವಿಟ್ವರ್, ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಫೆ.16 ರಂದು ಮೈಸೂರಿಗೆ ಆಗಮಿಸಿದ ಅವರು ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಅಣೆಕಟ್ಟೆಗೆ ತೆರಳಿದ್ದಾರೆ. ಅಲ್ಲಿನ ನಿಸರ್ಗ ತಾಣಗಳನ್ನು ವೀಕ್ಷಿಸಿದ ಬಳಿಕ ಕಾರಾಪುರ ಜಂಗಲ್ ಲಾಡ್ಜ್‌ನಲ್ಲಿ ತಂಗಿದ್ದರು. ನಂತರ ನಾಗರಹೊಳೆ ಸುತ್ತಮುತ್ತಲಿನ ಸುಂದರ ತಾಣಗಳನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ.

ಈ ವೇಳೆ ನೆನಪಿನಾರ್ಥವಾಗಿ ಒಂದು ಗಿಡವನ್ನು ಸಹ ನೆಟ್ಟಿದ್ದಾರೆ. ಗಿಡ ನೆಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಇಲ್ಲಿನ ಪ್ರಕೃತಿ ಸೊಬಗಿಗೆ ಮನಸೋತಿರುವ ಅವರು ಪರಿಸರದ ಭವ್ಯತೆಯನ್ನು ಹಾಡಿಹೊಗಳಿದ್ದಾರೆ.

ಅವರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾಗ ಇಲ್ಲಿನ ಊಟವನ್ನು ಸವಿದು ಸಂತಸಗೊಂಡಿದ್ದಾರೆಂದು ಸಹ ಮೂಲಗಳು ತಿಳಿಸಿವೆ. ಕಬಿನಿ, ನಾಗರಹೊಳೆಯಲ್ಲಿನ ಎರಡು ದಿನಗಳ ಪ್ರವಾಸ ಮುಗಿಸಿಕೊಂಡು ಫೆ.18 ರಂದು ಮುಂಬೈಗೆ ಹಿಂದಿರುಗಿದ್ದಾರೆ. (ಎಂ.ಎನ್)

Leave a Reply

comments

Related Articles

error: