ದೇಶಪ್ರಮುಖ ಸುದ್ದಿ

ಹಿಮಸ್ಫೋಟ ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕನ ಮಕ್ಕಳನ್ನು ದತ್ತು ಪಡೆದ ನಟ ಸೋನು ಸೂದ್

ಡೆಹ್ರಡೂನ್​,ಫೆ.20-ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ನಾಲ್ಕು ಹೆಣ್ಣು ಮಕ್ಕಳನ್ನು ದತ್ತು ಪಡೆಯಲು ಬಾಲಿವುಡ್ ನಟ ಸೋನು ಸೂದ್ ಮುಂದಾಗಿದ್ದಾರೆ.

ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದ ಅಲಾಂ ಸಿಂಗ್​ ಪುಂದಿರ್​ (45) ಅವರು ತಪೋವನ್​ ಜನ ವಿದ್ಯುತ್​ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದರು. ಹಿಮಸ್ಫೋಟ ಸಂಭವಿಸಿದ ವೇಳೆ ಆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲರೂ ನೀರಿನಲ್ಲಿ ಕೊಚ್ಚಿಹೋಗಿದ್ದರು. ಅಲಾಂ ಸಿಂಗ್ ಪುಂದಿರ್ ಸಾವಿನಿಂದಾಗಿ ಅವರ ಪತ್ನಿ ಹಾಗೂ ನಾಲ್ಕು ಹೆಣ್ಣು ಮಕ್ಕಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು.

ಈ ಕುಟುಂಬದ ನೋವನ್ನು ಅರಿತ ಸೋನು ಸೂದ್​ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಆ ನಾಲ್ಕು ಹೆಣ್ಣು ಮಕ್ಕಳನ್ನು ದತ್ತು ಪಡೆಯುವುದಾಗಿ ತಿಳಿಸಿದ್ದಾರೆ. ಅಂಚಲಾ (14) ಅಂತರ (11) ಕಾಜಲ್ (8) ಮತ್ತು ಅನಾನ್ಯ ಹೆಸರಿನ ನಾಲ್ಕು ಹೆಣ್ಣು ಮಕ್ಕಳ ಶಿಕ್ಷಣ ವೆಚ್ಚವನ್ನು ಅವರೇ ಭರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಆ ಕುಟುಂಬದ ಸಂಪೂರ್ಣ ಜೀವನ ನಿರ್ವಹಣೆ ಹಣವನ್ನು ಸೋನು ಸೂದ್​ ನೀಡಲಿದ್ದಾರೆ.

ಹಿಮ ಪ್ರವಾಹದಿಂದಾಗಿ ನನ್ನ ಕುಟುಂಬದ ಯಜಮಾನನೇ ನಮ್ಮನ್ನು ಬಿಟ್ಟು ಹೋದರು. ಸಂಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ಸೋನು ಸೂದ್​ ಅವರು ಗಾಡ್​ ಫಾದರ್​ ರೂಪದಲ್ಲಿ ಬಂದಿದ್ದಾರೆ ಎಂದು ಸರೋಜಿನಿ ದೇವಿ ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​, ಎಂ.ಎನ್)

 

Leave a Reply

comments

Related Articles

error: