ಮೈಸೂರು

ದ್ವಿಚಕ್ರವಾಹನಕ್ಕೆ ರಿಕ್ಷಾ ಡಿಕ್ಕಿ : ಸವಾರ ಸಾವು

ರಿಕ್ಷಾ ಮತ್ತು ದ್ವಿಚಕ್ರವಾಹನದ ನಡುವೆ  ಡಿಕ್ಕಿ ಸಂಭವಿಸಿದ ಪರಿಣಾಮ  ದ್ವಿಚಕ್ರ ವಾಹನ ಸವಾರನೋರ್ವ ಸಾವನ್ನಪ್ಪಿದ ಘಟನೆ ಮದ್ದೂರಿನಲ್ಲಿ ನಡೆದಿದೆ.

ಮೃತನನ್ನು ಮಂಡ್ಯಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದ ಯುವಕ ಪ್ರತಾಪ್ (26) ಎಂದು ಗುರುತಿಸಲಾಗಿದೆ. ಈತ ಕೆ.ಎಂ.ದೊಡ್ಡಿಗೆ ಹೋಗಿ ತಿರುಗಿ ಬರುತ್ತಿರುವ ವೇಳೆ ಬೋರಾಪುರ ಗೇಟ್ ಬಳಿ ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ ಪರಿಣಾಮ ಸವಾರ ನೆಲಕ್ಕುರುಳಿದ್ದಾನೆ. ತಲೆಗೆ ತೀವ್ರರೀತಿಯ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದ್ದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: