ಮೈಸೂರು

ಸರಕಾರದಿಂದ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು : ಡಾ. ಎಸ್. ಎಲ್. ಭೈರಪ್ಪ

ಮೈಸೂರು,ಫೆ.21 :- ಸರಕಾರದಿಂದ ಕಲೆ ಬೆಳಯುತ್ತದೆ ಎಂಬ ನಿರೀಕ್ಷೆ ಇರಬಾರದು ಎಂದು ಖ್ಯಾತ ಸಾಹಿತಿ ಡಾ. ಎಸ್. ಎಲ್. ಭೈರಪ್ಪನವರು ಹೇಳಿದರು.
ನಗರದ ಕಲಾಮಂದಿರದಲ್ಲಿ ಇಂದು ಏರ್ಪಡಿಸಲಾಗಿದ್ದ ಡಾ. ಎಸ್. ಎಲ್. ಭೈರಪ್ಪನವರ ಪರ್ವ ಕಾದಂಬರಿ ಮತ್ತು ರಂಗಪ್ರಸ್ತುತಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ಕಲೆ ಸರಕಾರದಿಂದ ಬೆಳೆಯುತ್ತದೆ ಎಂದು ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂದರು.
ಅದೆಷ್ಟೋ ಸಂಗೀತ ಸಂಸ್ಥೆಗಳು ಸರಕಾರದ ನೆರವಿಲ್ಲದೆ ಟಿಕೆಟ್ ನಿಂದ, ಸಂಸ್ಥೆಯ ಸದಸ್ಯರಿಂದ ಬೆಳೆಯುತ್ತಿದೆ ಎಂದು ಭೈರಪ್ಪನವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನಾಟಕ ವೀಕ್ಷಣೆಗೆ ಪ್ರೇಕರ ಕೊರತೆ ಕಾಣುತ್ತದೆ ಎಂದು ಅವರು ಹೇಳಿದರು. ಮಹಾರಾಷ್ಟ್ರದಲ್ಲಿ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಇದೆ ಎಂದು  ತಿಳಿಸಿದರು. ಈ ಹಿಂದೆ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸುತ್ತಿದ್ದರು. ಆದರೆ ಈಗ ನಾಟಕ ನೋಡುವವರ ಸಂಖ್ಯೆ ಕಡಿಮೆ ಆಗಿದೆ ಎಂದು ತಿಳಿಸಿದರು. ನಾಟಕ ಪ್ರದರ್ಶನವನ್ನು ಉಚಿತವಾಗಿ ನಡೆಸಬಾರದು.  ಟಿಕಟ್ ಇರದಿದ್ದರೆ ಪ್ರೇಕ್ಷಕರಿಗೆ ಅದರ ರಸ ಗೊತ್ತಾಗುವುದಿಲ್ಲ ಎಂದರು.
ಹಾಗೆಯೇ ಪರ್ವ ನಾಟಕಕ್ಕೂ ಟಿಕೆಟ್ ನಿಗದಿಗೊಳಿಸಲಾಗಿದೆ. 1 ಸಾವಿರ, 500 ರೂ. 250 ರೂ. ಟಿಕೆಟ್ ದರ ಇದೆ. ಇದು ಕಡಿಮೆ ಎಂದರು. ಇಲ್ಲಿ ದುಡ್ಡು  ಮುಖ್ಯ ಅಲ್ಲ ಎಂದ ಅವರು ನಾಟಕ ಏಳೂವರೆ ಗಂಟೆಗಳ ಕಾಲ ನಡೆಯಲಿದೆ.  ಹಾಗಾಗಿ ಈ ದರ ಕಡಿಮೆ ಎಂದವರು ತಿಳಿಸಿದರು. ಎರಡೂವರೆ ಗಂಟೆಯ ಸಿನಿಮಾಗೆ 300ರಿಂದ 400 ರೂ. ನೀಡಿ ನೋಡುತ್ತೇವೆ. ಹಾಗಾಗಿ ಈ ದರ ಕಡಿಮೆ ಎಂದರು.
ಸಾಹಿತ್ಯ ಕೃತಿಯ ಅಂತರಂಗ ಶೋಧಿಸಿ ಹೇಳುವ ವಿದ್ವತ್, ಸಂವೇದನೆ ಇರುವ ವ್ಯಕ್ತಿ ಶತಾವಧಾನಿ ಗಣೇಶ್ ಅವರು. ಇಂಥ ವ್ಯಕ್ತಿಯನ್ನು ಹೋಲುವವರು ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ಭೈರಪ್ಪನವರು ಹೇಳಿದರು.
ಈ ಸಂದರ್ಭದಲ್ಲಿ ಭೈರಪ್ಪನವರು ಪರ್ವ ನಾಟಕದ ಟಿಕೆಟ್ ಅನ್ನು ಬಿಡುಗಡೆ ಮಾಡಿ, 1 ಸಾವಿರ ರೂ. ನ ಮೊದಲ ಟಿಕೆಟ್ ಅನ್ನು ಖರೀದಿಸಿರು.
ಖ್ಯಾತ ವಿಮರ್ಶಕರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಪರ್ವ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ನಾಟಕ ನಿರ್ದೇಶಕ ಪ್ರಕಾಶ ಬೆಳವಾಡಿ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಡಾ. ಶೇಖರ್ ಅವರುಗಳು ಉಪಸ್ಥಿತರಿದ್ದರು. (ಕೆ. ಎಸ್,ಎಸ್.ಎಚ್)

Leave a Reply

comments

Related Articles

error: