ಕ್ರೀಡೆಪ್ರಮುಖ ಸುದ್ದಿ

ಐಪಿಎಲ್ 2021: ಮುಂಬೈ ಮತ್ತು ಅಹಮದಾಬಾದ್ ಐಪಿಎಲ್ ಪಂದ್ಯ ಆತಿಥ್ಯ ವಹಿಸುವ ಸಾಧ್ಯತೆ

ದೇಶ(ನವದೆಹಲಿ)ಫೆ.22:- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂಬರುವ 14 ನೇ ಸೀಸನ್ ನ ಪಂದ್ಯಗಳನ್ನು ಮುಂಬೈ ಮತ್ತು ಅಹಮದಾಬಾದ್ ನಲ್ಲಿ ಆಯೋಜಿಸಬಹುದು ಎನ್ನಲಾಗಿದೆ.
ಇದರಲ್ಲಿ ಮುಂಬೈನ ನಾಲ್ಕು ಸ್ಥಳಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಬಹುದು ಮತ್ತು ಪ್ಲೇ ಆಫ್ ಸುತ್ತಿನ ಪಂದ್ಯಗಳನ್ನು ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಆಡಬಹುದು ಎನ್ನಲಾಗಿದೆ. ಮೂಲಗಳ ಪ್ರಕಾರ, ನಾಲ್ಕು ಕ್ರೀಡಾಂಗಣಗಳಲ್ಲಿ ಲೀಗ್ ಹಂತದ ಪಂದ್ಯಗಳನ್ನು ಆಯೋಜಿಸಲು ಚರ್ಚೆಗಳು ನಡೆದಿವೆ. ಐಪಿಎಲ್ -14 ಏಪ್ರಿಲ್ ಎರಡನೇ ವಾರದಲ್ಲಿ ಅಥವಾ ನಂತರ ಪ್ರಾರಂಭವಾಗಬಹುದು.
“ಪ್ರಸ್ತುತ ಮುಂಬೈನ ನಾಲ್ಕು ಕ್ರೀಡಾಂಗಣಗಳಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಲ್ಲಿ ಬ್ರಾಡ್‌ ಬೋರ್ನ್ ಕ್ರೀಡಾಂಗಣ, ವಾಂಖೆಡೆ ಕ್ರೀಡಾಂಗಣ, ಡಿ.ವೈ. ಪಾಟೀಲ್ ಕ್ರೀಡಾಂಗಣ ಮತ್ತು ರಿಲಯನ್ಸ್ ಕ್ರಿಕೆಟ್ ಕ್ರೀಡಾಂಗಣ ಸೇರಿವೆ. ಅಹಮದಾಬಾದ್ ‌ನ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಪ್ಲೇಆಫ್ ಪಂದ್ಯಗಳ ಸಮಾರಂಭವು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: