ಮೈಸೂರು

ನಮ್ಮೂರಲ್ಲಿ ರಾಮಮಂದಿರ ಕಟ್ಟುತ್ತೇನೆ ಎಂಬ ಮಾತು ಧರ್ಮ ವಿರೋಧಿಯೆಂದು ಹೇಳುತ್ತಿರುವುದು ಹಾಸ್ಯಾಸ್ಪದ : ಮಹದೇವಪ್ಪ ಕಿಡಿ

ಮೈಸೂರು,ಫೆ.22:- ನಮ್ಮೂರಲ್ಲಿ ರಾಮ ಮಂದಿರ ಕಟ್ಟುತ್ತೇನೆ ಎಂಬ ಮಾತು ಧರ್ಮ ವಿರೋಧಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಗಳಲ್ಲಿ ಒಂದು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.

ನಮ್ಮೂರಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ವ್ಯಕ್ತವಾಗಿರುವ ಟೀಕೆಗಳಿಗೆ ಸರಣಿ ಟ್ವೀಟ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು  ರಾಮ ಮಂದಿರವು ಊರಲ್ಲಿ ಕಟ್ಟಿದಾಗಲೂ ಸಹ ಅವನಿಗೆ ಮನ್ನಣೆ ಸಿಗುತ್ತಿದೆ ಎಂದರೆ ಅವನು ನಿಜವಾದ ರಾಮಭಕ್ತನಾಗಿರುತ್ತಾನೆ. ಇಲ್ಲ ಅಯೋಧ್ಯೆಯಲ್ಲೇ ಕಟ್ಟಬೇಕು, ಬೇರೆಲ್ಲಿ ಕಟ್ಟಿದರೂ ಅವನು ರಾಮ ವಿರೋಧಿ ಎಂದರೆ ಅವನು ಸಂವಿಧಾನ ವಿರೋಧಿ ಬಿಜೆಪಿ ಭಕ್ತನಾಗಿರುತ್ತಾನೆ. ಇಂತಹ ಮೂರ್ಖರಿಗೆ ಧರ್ಮ ಗೊತ್ತಿಲ್ಲ, ದೇವರು ಗೊತ್ತಿಲ್ಲ, ಇವರಿಗೆ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ.

ಇವರಿಗೆ ಕೇವಲ ಕೋಮುವಾದಿ ರಾಜಕೀಯ ಪಕ್ಷವೊಂದರ ಹಿತ ಮುಖ್ಯವಾಗಿದೆ ಅಷ್ಟೇ.ಆದರೆ ಬಾಬಾ ಸಾಹೇಬರ ನೆಲದಲ್ಲಿ ಹುಟ್ಟಿ ಬಾಬಾ ಸಾಹೇಬರ ಆಲೋಚನೆಯಿಂದಲೇ ಪ್ರಭಾವಿತರಾದ ನಾವು ಎಂದಿಗೂ ಈ ಮನುವಾದಿ ಧಾರ್ಮಿಕ ಮತ್ತು ರಾಜಕೀಯ ಹುಚ್ಚರ ಕುತಂತ್ರಗಳಿಗೆ ಮನ್ನಣೆ ಕೊಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ ಎಂದು ಟ್ವಿಟ್ ನಲ್ಲಿ ಹೇಳಿಕೊಂಡಿದ್ದಾರೆ.

Leave a Reply

comments

Related Articles

error: