ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2021ನೆ ಸಾಲಿನ ಡೈರಿ-ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಫೆ.22:- 2021ನೆ ಸಾಲಿನ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆಯನ್ನು ಸಚಿವ ಎಸ್ ಟಿ ಸೋಮಶೇಖರ್ ಮೈಸೂರು ಪತ್ರಕರ್ತರ ಸಂಘದಲ್ಲಿ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್ ಏನು ಹೇಳಿದ್ದಾರೆ. ಎಲ್ಲ ವನ್ನು ಈಡೇರಿಸುವ ಕೆಲಸ ಪ್ರಾಮಾಣಿಕ ವಾಗಿ ಮಾಡುತ್ತೇವೆ. ಎಲ್ಲರ ಭಾವನೆಗೆ ಗೌರವ ಕೊಡುವ ಕೆಲಸ ಮಾಡುತ್ತೇವೆ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಪ್ರಪಂಚದ ಅಭದ್ರತೆ ಯ ಬಗ್ಗೆ ಬರೆದು ನಿತ್ಯವೂ ಅಭದ್ರತೆಯ ಭಾವನೆಯಿಂದ ಜೀವನವನ್ನು ಪತ್ರಕರ್ತರು ನಡೆಸುತ್ತಿದ್ದಾರೆ. ಅಭದ್ರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಡಾ ಅಧ್ಯಕ್ಷ ರಾದ ಹೆಚ್.ವಿ.ರಾಜೀವ್ ಅವರು ನಿವೇಶನ ನೀಡುವ ಕುರಿತು ಪ್ರಸ್ತಾಪ ಇಟ್ಟಿದ್ದು . ಉಸ್ತುವಾರಿ ಸಚಿವರು ಪ್ರೋತ್ಸಾಹ ಕೊಡ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಸ್ವಂತ ಮನೆ ಕಟ್ಟಿ ನೀವಿರಬೇಕು. ಅದಕ್ಕೆ ನಿವೇಶನ ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿಯಾಗುತ್ತಿದೆ. ಮುಂದಿ ನ ದಿನಗಳಲ್ಲಿ ಅದನ್ನು ಕೂಡ ಘೋಷಣೆ ಮಾಡುವ ಒಂದು ಹಂತ ಬೇಗ ಬರಲಿ ಎಂದು ಆಶಿಸಿದರು.

ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತಿತರ ರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: