ದೇಶಪ್ರಮುಖ ಸುದ್ದಿ

#FuelLootByBJP: ಮೋದಿ ಜನ ಸಾಮಾನ್ಯರ ಜೇಬು ಬರಿದು ಮಾಡಿ ತನ್ನ ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಕಿಡಿ

ನವದೆಹಲಿ,ಫೆ.22-ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ಜನ ಸಾಮಾನ್ಯರ ಜೇಬಿನಿಂದ ಹಣ ತೆಗೆದು ತನ್ನ ಸ್ನೇಹಿತರಿಗೆ ನೀಡುತ್ತಿದ್ದಾರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ, ಟ್ವೀಟ್‌ನಲ್ಲಿ #FuelLootByBJP ಎಂದು ಹ್ಯಾಶ್‌ ಟ್ಯಾಗ್‌ ಅನ್ನೂ ಲಗತ್ತಿಸಿದ್ದಾರೆ. ಆ ಮೂಲಕ ತೈಲ ದರ ಏರಿಕೆ ಮಾಡುವ ಮೂಲಕ ಬಿಜೆಪಿ ಲೂಟಿ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಪೆಟ್ರೋಲ್‌ ಪಂಪ್‌ನಲ್ಲಿ ವಾಹನಗಳಿಗೆ ಇಂಧನ ತುಂಬಿಸುವಾಗ ವೇಗವಾಗಿ ಏರಿಕೆಯಾಗುತ್ತಿರುವ ಮೀಟರ್‌ ನೋಡುವಾಗ ನೆನಪಿಡಿ, ಕಚ್ಚಾ ತೈಲದ ಬೆಲೆ ಏರಿಕೆಯಾಗಿಲ್ಲ. ಇಳಿಕೆಯಾಗಿದೆ ಎನ್ನುವುದನ್ನು ಮರೆಯಬೇಡಿ. ಪೆಟ್ರೋಲ್‌ ದರ ಲೀಟರ್‌ಗೆ ನೂರು ರೂಪಾಯಿ ಇದೆ. ನಿಮ್ಮ ಜೇಬನ್ನು ಖಾಲಿ ಮಾಡಿ ತನ್ನ ಸ್ನೇಹಿತರಿಗೆ ಸಹಾಯ ಮಾಡುವ ಮಹಾನ್‌ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.

ಇದರ ಜತೆಗೆ ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಅವರ ಪತಿ ರಾಬರ್ಟ್‌ ವಾದ್ರ ಸೈಕಲ್‌ನಲ್ಲಿ ತೆರಳುವ ಮೂಲಕ ಪೆಟ್ರೋಲ್‌ ದರ ಏರಿಕೆಯನ್ನು ಖಂಡಿಸಿದ್ದಾರೆ. ದೆಹಲಿಯ ಖಾನ್‌ ಮಾರುಕಟ್ಟೆಯಿಂದ ತಮ್ಮ ಕಚೇರಿವರೆಗೆ ಸೈಕಲ್‌ನಲ್ಲಿ ತೆರಳುವ ಮೂಲಕ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದಾರೆ.

ದೇಶದ ಹಲವು ಕಡೆ ಪೆಟ್ರೋಲ್ ಶತಕ ಬಾರಿಸಿ ಮುನ್ನುಗುತ್ತಿದ್ದು, ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ನೂರರ ಸನಿಹದಲ್ಲಿದೆ. ಇನ್ನೂ ಪೆಟ್ರೋಲ್‌ ದರ ಏರಿಕೆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೇ ಈಗ ಉಂಟಾಗುತ್ತಿರುವ ತೈಲ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ದೂರಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: