ಕ್ರೀಡೆಮೈಸೂರು

ಕಬಡ್ಡಿ ಕ್ರೀಡೆಯನ್ನು ಉಳಿಸಿ ಬೆಳೆಸಬೇಕು : ಹೇಮಂತ್ ಕುಮಾರ್ ಗೌಡ

ಮೈಸೂರು,ಫೆ.22:- ದೊಡ್ಡಕೆರೆ ಮೈದಾನದಲ್ಲಿ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಪರಿಸರ ಸ್ನೇಹಿ ತಂಡದ ವತಿಯಿಂದ  ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು,

ಮೈಸೂರಿನ ಕುಂಬಾರಕೊಪ್ಪಲು ಯಂಗ್ ಸ್ಟರ್ ತಂಡದವರು  ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ಪ್ರಥಮ ಸ್ಥಾನ ಗಳಿಸಿದರು.  ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ 21 ತಂಡಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕುಂಬಾರಕೊಪ್ಪಲು ಯಂಗ್ ಸ್ಟರ್ ಮೊದಲನೇ ಸ್ಥಾನ ಗೆದ್ದು 30,000ರೂ ನಗದು ಹಾಗೂ ಟ್ರೋಫಿ  ಬಹುಮಾನ ಪಡೆದಿದ್ದಾರೆ.  ಎರಡನೇ ಸ್ಥಾನವನ್ನು  ಕ್ಯಾತನಹಳ್ಳಿ  ವೈಸಿಎಸ್  ತಂಡ ಪಡೆದಿದ್ದು, 20000 ರೂ ನಗದು  ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾರೆ.

ಮೂರನೇ ಸ್ಥಾನವನ್ನು  ಹಿರಿಮರಳಿ ಪಡೆದಿದ್ದು, 7500ರೂ ನಗದು ಹಾಗೂ ಟ್ರೋಫಿಯನ್ನು ಬಹುಮಾನವಾಗಿ  ಪಡೆದಿದ್ದಾರೆ. ನಾಲ್ಕನೇ ಸ್ಥಾನವನ್ನು ನಾಗನಹಳ್ಳಿ ಯುವಕರ ತಂಡ ಪಡೆದಿದ್ದು,  7500ರೂ ನಗದು  ಹಾಗೂ ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾರೆ.

ಉತ್ತಮ ದಾಳಿಗಾರರಾಗಿ ಶಶಾಂಕ್ ಕ್ಯಾತನಹಳ್ಳಿ ಐಸಿಎಸ್  1000ರೂ ನಗದು ಬಹುಮಾನ,  ಉತ್ತಮ ಹಿಡಿತಗಾರನಾಗಿ ಕುಂಬಾರಕೊಪ್ಪಲ್ ನ ಯಂಗ್ ಸ್ಟರ್  ಅಭಿಷೇಕ್ 1000ರೂ ನಗದು ಬಹುಮಾನ, ಸರ್ವೋತ್ತಮ ಆಟಗಾರ ಕುಂಬಾರಕೊಪ್ಪಲ್ ನ ಯಂಗ್ ಸ್ಟರ್ ನ ರಕ್ಷಿತ್ ಪೂಜಾರಿ ಪಡೆದಿದ್ದಾರೆ. ಸ್ಪರ್ಧಿಸಿದ ಎಲ್ಲಾ ಆಟಗಾರರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.

ಬಹುಮಾನ ವಿತರಿಸಿ ಮಾತನಾಡಿದ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ  ಕಬಡ್ಡಿ ಕ್ರೀಡೆಯನ್ನು ಉಳಿಸಿ ಬೆಳೆಸಬೇಕು ಎಂದರು. ಕಬಡ್ಡಿ ಗ್ರಾಮೀಣ ಕ್ರೀಡೆ. ದೇಶದ ರಾಷ್ಟ್ರೀಯತೆ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿರುವ ಕ್ರೀಡೆ. ಕ್ರೀಡೆ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಸದೃಢಗೊಳಿಸುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಆರೋಗ್ಯ ಕಾಯ್ದುಕೊಳ್ಳಿ. ಕರ್ನಾಟಕ ರಾಜ್ಯದಲ್ಲಿ ಕಬಡ್ಡಿಪಟುಗಳೇ ಇಲ್ಲವೇನೋ ಎನ್ನುವ ತಪ್ಪು ಕಲ್ಪನೆಯನ್ನು ಜನರ ಮನಸ್ಸಿನಿಂದ ಹೋಗಲಾಡಿಸಿ ಕಬಡ್ಡಿಯನ್ನು ಉಳಿಸುವುದಕ್ಕಾಗಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಈ ಸಂದರ್ಭ ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ,ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಸಂಚಾಲಕ ರಾದ ಪರಮೇಶ್ ಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ರೇಣುಕರಾಜ ,ಪರಿಸರ ಸ್ನೇಹಿ ತಂಡದ ಅಧ್ಯಕ್ಷರಾದ ಲೋಹಿತ್ ,ಸುಚೀಂದ್ರ ,ಮಂಜುನಾಥ್ ,ಮಧು ಎನ್ ಪೂಜಾರ್ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: