ಮೈಸೂರು

ಉದ್ಯಾನವನದ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ರಾಮದಾಸ್

ಮೈಸೂರು,ಫೆ.22:- ಶಾಸಕರಾದ ಎಸ್.ಎ. ರಾಮದಾಸ್ ಅವರು ವಾರ್ಡ್  62 ರ ಡಿ ದೇವರಾಜ ಅರಸು ಕಾಲೋನಿಯ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ನಗರಪಾಲಿಕೆಯ ಅನುದಾನ ವತಿಯಿಂದ ಶುದ್ಧ ಕುಡಿಯುವ ನೀರಿನ‌ ಘಟಕ ಉದ್ಘಾಟನೆಯನ್ನು ಹಾಗೂ ವಾರ್ಡ್ 55 ರ ಸೆಂಟ್ ಮೇರಿಸ್ ವೃತ್ತದ ಬಳಿ ಇರುವ ರಾಮಕೃಷ್ಣ ಆಸ್ಪತ್ರೆಯ ಎದುರಿನ‌ ಉದ್ಯಾನವನದ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಮೈಸೂರು ಅಂದ ತಕ್ಷಣ ಆಕಾಶವಾಣಿ ನೆನಪಾಗುತ್ತದೆ. ವಿಶೇಷವಾಗಿ 2 ಪಾರ್ಕ್  ಗಳನ್ನು 18ಲಕ್ಷರೂ.ಗಳ ವೆಚ್ಚದಲ್ಲಿ ರೇಡಿಯೋ ಪಾರ್ಕ್  ಗಳನ್ನಾಗಿ ಅಭಿವೃದ್ಧಿ ಪಡಿಸುತ್ತಿದ್ದೇವೆ.    ರಾಮ ಕೃಷ್ಣ ನರ್ಸಿಂಗ್ ಹೋಮ್ ನವರು ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ಮುಂದೆ ಬಂದಿದ್ದಾರೆ.  ಅಲ್ಲದೇ ಸಾರ್ವಜನಿಕ ಸಹಭಾಗಿತ್ವಕ್ಕೆ ಹೆಚ್ಚಿನ ಪಾರ್ಕ್ ಗಳನ್ನು ಒಳಪಡಿಸುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರುಗಳಾದ ಶಾಂತಮ್ಮ ವಡಿವೇಲು ಹಾಗೂ ಮಾ ವಿ ರಾಮಪ್ರಸಾದ್. ಉಮಾಶಂಕರ್,ಡಾ. ಲಕ್ಷ್ಮಿ,   ಉಮಾಶಂಕರ್, ಶಿವಪ್ಪ, ಮುರುಳಿ, ವಿಜಯ, ಶಿವಲಿಂಗಾಚಾರ್  ಎಸ್.ಟಿ.ಡಿ ಮಂಜು , ಸಿದ್ದಪ್ಪ , ಬಿಜೆಪಿಯ ಓಂ ಶ್ರೀನಿವಾಸ್, ಬಂಗಾರಿ ಸುರೇಶ್, ಆರ್ಟಿಸ್ಟ್ ನಾಗರಾಜ್. ಸ್ಥಳೀಯರಾದ ನಾಗರಾಜ್, ರಾಜಣ್ಣ, ಮಹದೇವ್, ಕುಮಾರ್, ರಾಮಯ್ಯ, ಶೋಭಾ, ರುದ್ರೇಶ್. ನಗರಪಾಲಿಕಾ ಅಧಿಕಾರಿಗಳಾದ ಎಇಇ ವಿನಯ್, ಎ.ಇ ಕೃತಿಕಾ , ಶುಶ್ರುತ್ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: