ಕರ್ನಾಟಕಮೈಸೂರು

ಮಾನಸಿಕ ವೈದ್ಯ ಡಾ.ಆಶೋಕ್ ಪೈ ನಿಧನ

ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷ ಡಾ. ಅಶೋಕ್ ಪೈ ಸೆ. 29, ಗುರುವಾರ ಮಧ್ಯರಾತ್ರಿ 12ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ವಿಚಾರ ಸಂಕಿರಣಕ್ಕಾಗಿ ಸ್ಕಾಟ್ಲ್ಯಾಂಡ್`ಗೆ ಪತ್ನಿ ರಜನಿ ಪೈಅವರೊಂದಿಗೆ ತೆರಳಿದ್ದರು. ಹೃದಯಾಘಾತವಾದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರು ‘ಕಾಡಿನ ಬೆಂಕಿ’, ‘ಉಷಾಕಿರಣ’ ಸಿನಿಮಾಗಳನ್ನು ನಿರ್ಮಿಸಿದ್ದರು. ಶಿವಮೊಗ್ಗದಲ್ಲಿ ಅಶೋಕ್ ಪೈ ಅವರ ಮಾನಸ ಆಸ್ಪತ್ರೆ ಇದೆ.

ಸಚಿವರ ಸಂತಾಪ: ಡಾ. ಅಶೋಕ್ ಪೈ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕದ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದು, ಮಹೇಶ್ ಅವರ ನಿಧನದಿಂದ ಆರೋಗ್ಯ ಕ್ಷೇತ್ರಕ್ಕೆ ನಷ್ಟ ಎಂದು ತಿಳಿದ್ದಾರೆ.

Leave a Reply

comments

Related Articles

error: