ಸುದ್ದಿ ಸಂಕ್ಷಿಪ್ತ

ಫೆ.26 ರಿಂದ 28 ರವರೆಗಿನ ನಾಟಕ ಪ್ರದರ್ಶನದ ಮಾಹಿತಿ

ಮೈಸೂರು,ಫೆ.22-ನಗರದಲ್ಲಿ ಫೆ.26 ರಿಂದ ಫೆ.28 ರವರೆಗೆ ಪ್ರದರ್ಶನಗೊಳ್ಳುವ ನಾಟಕಗಳ ಕುರಿತ ಮಾಹಿತಿ ಇಂತಿದೆ.

ಫೆ.26, 27 ರಂದು ಸಂಜೆ 7 ಗಂಟೆಗೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಾ.ಕೆ.ಶಿವರಾಮಕಾರಂತರ `ಬೆಟ್ಟದ ಜೀವ’ ನಾಟಕ ಪ್ರದರ್ಶನಗೊಳ್ಳಲಿದೆ. ಎಸ್.ಆರ್. ರಮೇಶ್ ನಿರ್ದೇಶನದ ಈ ನಾಟಕವನ್ನು ಮೈಸೂರಿನ ಪರಿವರ್ತನ ರಂಗಸಮಾಜ ತಂಡ ಪ್ರಸ್ತುತ ಪಡಿಸಲಿದೆ. ನಾಟಕಕ್ಕೆ ಪ್ರವೇಶ ದರ 100 ರೂ. ಆಗಿದೆ.

ವಿಜ್ಞಾನ ನಾಟಕೋತ್ಸವದಲ್ಲಿ ಫೆ.28 ರಂದು ಸಂಜೆ 6.15ಕ್ಕೆ ಕಲಾಮಂದಿರದ ಕಿರುರಂಗಮಂದಿರದಲ್ಲಿ ಡಾ. ರಿಚರ್ಡ್ ಪಿ. ಫೆನ್ಮೆನ್ ಅವರ ಕಥೆಯನ್ನಾಧರಿಸಿದ `Q E D’ ನಾಟಕ ಪ್ರದರ್ಶನಗೊಳ್ಳಲಿದೆ. ಯತೀಶ್ ಕೊಳ್ಳೇಗಾಲ ನಿರ್ದೇಶನದ ನಾಟಕವನ್ನು ಮೈಸೂರಿನ ಅರಿವು ರಂಗ ತಂಡ ಸಾದರಪಡಿಸಲಿದೆ. ಪ್ರವೇಶ ದರ 100 ರೂ. ಗಳಾಗಿದೆ. (ಎಂ.ಎನ್)

Leave a Reply

comments

Related Articles

error: