ಮೈಸೂರು

ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ

ಮನನೊಂದ ಯುವತಿಯೋರ್ವಳು ಕ್ರಿಮಿನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ಕೆ.ಆರ್.ನಗರ ನಿವಾಸಿ ಭವಾನಿ (22) ಎಂದು ಗುರುತಿಸಲಾಗಿದೆ. ಈಕೆ ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣಳಾಗಿದ್ದು, ಮುಂದೆ ವಿದ್ಯಾಭ್ಯಾಸ ಪೂರೈಸಿರಲಿಲ್ಲ. ಮನೆಯಲ್ಲಿಯೇ ಇರುತ್ತಿದ್ದ ಈಕೆ ಮಂಗಳವಾರ ಸಾಯಂಕಾಲ ಕೀಟನಾಶಕ ಮಾತ್ರೆ ಸೇವಿಸಿ ಒದ್ದಾಡುತ್ತಿದ್ದಳು.  ಇದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ.

ಕೆ.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: