ಪ್ರಮುಖ ಸುದ್ದಿಮನರಂಜನೆಮೈಸೂರು

ಸ್ಟಾರ್ ನಟ ದರ್ಶನ್ ಬಗ್ಗೆ ಅವಹೇಳನಕಾರಿ ಮಾತನಾಡಿದ್ರಾ ನಟ ಜಗ್ಗೇಶ್ : ಅಭಿಮಾನಿಗಳಿಂದ ತರಾಟೆ

ಮೈಸೂರು,ಫೆ.22:- ಜಾಹೀರಾತು ನೀಡುವ ಬಗ್ಗೆ ಮಾತನಾಡುವ ಭರದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಅವರ ಬಗ್ಗೆ ಜಗ್ಗೇಶ್​ ಮಾತನಾಡಿರುವ ಆಡಿಯೋ ಎನ್ನಲಾದ ಆಡಿಯೋ ಕ್ಲಿಪ್​ ಒಂದು ಹರಿದಾಡಿದ್ದು, ಅದರಿಂದಲೇ ನವರಸ ನಾಯಕ ಜಗ್ಗೇಶ್​ ಪೇಚಿಗೆ ಸಿಲುಕುವಂತಾಗಿದೆ. ನೆಚ್ಚಿನ ನಾಯಕನ ಬಗ್ಗೆ ಕೆಟ್ಟದಾಗಿ ಮಾತನಾಡಿದ ಜಗ್ಗೇಶ್ ಅವರನ್ನು ದರ್ಶನ್​ ಅಭಿಮಾನಿಗಳು ಸಿನಿಮಾ ಸೆಟ್​ನಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಜಗ್ಗೇಶ್​ ಅವರ ಧ್ವನಿ ಎನ್ನಲಾದ ಆಡಿಯೋ ಒಂದು ಹರಿದಾಡಿದೆ. ಅದರಲ್ಲಿ ಅವರು ದರ್ಶನ್​ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ರೆಕಾರ್ಡ್​ ಆಗಿದೆ. ಸಿನಿಮಾದ ನಿರ್ಮಾಪಕರೊಬ್ಬರೊಂದಿಗೆ ಜಗ್ಗೇಶ್​ ಮಾತನಾಡಿದ್ದ ಆ ಆಡಿಯೋ ಕ್ಲಿಪ್​ ದರ್ಶನ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ್ ಅಭಿಮಾನಿಗಳು ಡಿ.ಬಾಸ್ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದರಲ್ಲದೆ, ಧಿಕ್ಕಾರ ಘೋಷಣೆ ಕೂಗಿದರು.

ಜಗ್ಗೇಶ್​ ಅವರು ಮೈಸೂರಿನಲ್ಲಿ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಸಿನಿಮಾ ಸೆಟ್​ ಗೆ ದಾಳಿಯಿಟ್ಟಿರುವ ದರ್ಶನ್​ ಅಭಿಮಾನಿಗಳು ಜಗ್ಗೇಶ್​ ಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಜಗ್ಗೇಶ್​ ಮಾತ್ರ ಆ ಆಡಿಯೋ ಕ್ಲಿಪ್​ನಲ್ಲಿರುವ ಧ್ವನಿ ತನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ತಾನು ದರ್ಶನ್​ ಹೆಸರಿನ ವೆಬ್​ ಡಿಸೈನರ್​ ಬಗ್ಗೆ ಮಾತನಾಡಿದ್ದು, ಅದನ್ನು ಎಡಿಟ್​ ಮಾಡಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜಕೀಯ ಆರಂಭವಾಗಿದೆ. ಇದೊಂದು ದೊಡ್ಡ ಹುನ್ನಾರ ಎಂದು ಅವರು ಹೇಳಿದ್ದಾರೆ.

ಕೊನೆಗೂ ಒತ್ತಾಯಕ್ಕೆ ಮಣಿದ ಜಗ್ಗೇಶ್, ದರ್ಶನ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ನಂತರ ದರ್ಶನ್ ಅಭಿಮಾನಿಗಳು ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟು ಅಲ್ಲಿಂದ ತೆರಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: