ದೇಶಪ್ರಮುಖ ಸುದ್ದಿಮನರಂಜನೆ

ನಟಿ ರುಬಿನಾ ದಿಲೈಕ್ ಹಿಂದಿ ‘ಬಿಗ್‌ ಬಾಸ್‌ ಸೀಸನ್‌ 14’ ರಿಯಾಲಿಟಿ ಶೋ ವಿನ್ನರ್

ದೇಶ( ಮುಂಬೈ)ಫೆ.23:- ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಹಿಂದಿ ‘ಬಿಗ್‌ ಬಾಸ್‌ ಸೀಸನ್‌ 14’ ರಿಯಾಲಿಟಿ ಶೋ ವಿನ್ನರ್ ಕಿರುತೆರೆ ನಟಿ ರುಬಿನಾ ದಿಲೈಕ್‌ ಆಗಿದ್ದು, ಬಿಗ್‌ ಬಾಸ್‌ ಟ್ರೋಫಿ ಜೊತೆಗೆ 36 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.

ಇತರ ಸ್ಪರ್ಧಿಗಳಾದ ರಾಹುಲ್‌ ವೈದ್ಯ ಹಾಗೂ ನಿಕ್ಕಿ ತಂಬೋಲಿ ಕ್ರಮವಾಗಿ ಮೊದಲನೇ ಮತ್ತು ಎರಡನೇ ರನ್ನರ್‌ ಅಪ್‌ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಈ ಬಾರಿ ಬಿಗ್ ಬಾಸ್ ಫಿನಾಲೆಯಲ್ಲಿ ರುಬೀನಾ ಜೊತೆ ರಾಖಿ ಸಾವಂತ್‌, ನಿಕ್ಕಿ ತಂಬೋಲಿ, ಅಲಿ ಗೊನಿ, ರಾಹುಲ್‌ ವೈದ್ಯ ತೀವ್ರ ಪೈಪೋಟಿ ನೀಡಿದ್ದರು. ಅಂತಿಮವಾಗಿ ರುಬೀನಾಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ.

ತಮ್ಮ ಪತಿ ಅಭಿನವ್‌ ಶುಕ್ಲಾ ಜೊತೆ ಈ ಬಾರಿ ಬಿಗ್‌ ಬಾಸ್‌ ಮನೆ ಪ್ರವೇಶಿಸಿದ್ದ 33 ವರ್ಷದ ರುಬಿನಾ ಅವರಿಗೆ ಹಲವು ಸವಾಲುಗಳು ಎದುರಾಗಿದ್ದವು. ಎಲ್ಲ ಟಾಸ್ಕ್‌ಗಳನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದ ಅವರು ಅನೇಕ ಕಿರಿಕ್‌ ಗಳನ್ನೂ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಬಿಗ್‌ ಬಾಸ್‌ ನಿರೂಪಕ ಸಲ್ಮಾನ್‌ ಖಾನ್‌ ಅವರನ್ನೇ ರುಬಿನಾ ಎದುರು ಹಾಕಿಕೊಂಡಿದ್ದರು. ತನ್ನ ಗಂಡನ ಬಗ್ಗೆ ಅವಹೇಳನಕಾರಿಯಾಗಿ ಸಲ್ಮಾನ್‌ ಮಾತನಾಡಿದ್ದಾರೆ ಎಂದು ರುಬಿನಾ ಗರಂ ಆಗಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: