ಪ್ರಮುಖ ಸುದ್ದಿಮನರಂಜನೆ

ದಾಂಪತ್ಯ ಜೀವನಕ್ಕೆ‌ ಕಾಲಿಟ್ಟ ನಿರ್ದೇಶಕ ಎಸ್ ನಾರಾಯಣ್ ಪುತ್ರ ಪವನ್

ರಾಜ್ಯ( ಬೆಂಗಳೂರು)ಫೆ.23:- ಚಂದನವನದ​ ಹಿರಿಯ ನಿರ್ದೇಶಕ,ನಟ ಎಸ್ ​ನಾರಾಯಣ್​ ಅವರ ದ್ವಿತೀಯ ಪುತ್ರ ಪವನ್​ ದಾಂಪತ್ಯ ಜೀವನಕ್ಕೆ‌ ಕಾಲಿರಿಸಿದ್ದಾರೆ.

ಪವನ್ ಅವರು ಪವಿತ್ರಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಆರತಕ್ಷತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಶರಣ್, ನಟ ಶ್ರೀ ಮುರಳಿ, ಮುಖ್ಯಮಂತ್ರಿ ಚಂದ್ರು, ನಟಿಯರಾದ ಸುಧಾರಾಣಿ‌‌, ಮಾಳವಿಕಾ ಅವಿನಾಶ್, ಅಮೂಲ್ಯ ಹಾಗೂ ಸಚಿವ ಗೋಪಾಲಯ್ಯ, ಸಂಸದೆ ಸುಮಲತಾ, ರಾಕ್ ಲೈನ್ ವೆಂಕಟೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವದಂಪತಿಗೆ ಶುಭ ಕೋರಿದ್ದಾರೆ.

ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪವನ್​, ತಮ್ಮ ತಂದೆಯ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ‌‌ ಕಾರ್ಯನಿರ್ವಹಿಸಿದ್ದಲ್ಲದೆ, ಡಾರ್ಲಿಂಗ್​ ಕೃಷ್ಣ ಅಭಿನಯದ ‘ಶುಗರ್​ ಪ್ಯಾಕ್ಟರಿ’ ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ, ‘ಮುತ್ತು ರತ್ನ’ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಪವನ್ ಕಾಣಿಸಿಕೊಳ್ಳಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: