ಕ್ರೀಡೆಪ್ರಮುಖ ಸುದ್ದಿವಿದೇಶ

  ಶ್ರೀಲಂಕಾ: ವೇಗದ ಬೌಲಿಂಗ್ ಕೋಚ್ ಹುದ್ದೆಗೆ ಚಮಿಂದ ವಾಸ್ ರಾಜೀನಾಮೆ  : 3ದಿನಗಳ ಹಿಂದಷ್ಟೇ ನಡೆದಿತ್ತು ನೇಮಕಾತಿ !

ವಿದೇಶ(ಕೊಲಂಬೋ)ಫೆ.23:-   ದೇಶದ ಕ್ರಿಕೆಟ್ ಮಂಡಳಿಯೊಂದಿಗಿನ ವೇತನ ವಿವಾದದಿಂದಾಗಿ ಶ್ರೀಲಂಕಾದ ಮಾಜಿ ಹಿರಿಯ ವೇಗದ ಬೌಲರ್ ಚಮಿಂದ ವಾಸ್ ರಾಷ್ಟ್ರೀಯ ತಂಡದ ವೇಗದ ಬೌಲಿಂಗ್ ಕೋಚ್ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಈ ಹುದ್ದೆಗೆ ಕೇವಲ ಮೂರು ದಿನಗಳ ಹಿಂದಷ್ಟೇ ಅವರನ್ನು ನೇಮಿಸಲಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತಂಡವು ಹೊರಡುವ ಮುನ್ನ ವಾಸ್ ರಾಜೀನಾಮೆ ನೀಡಿದರು.

ಶ್ರೀಲಂಕಾ ಕ್ರಿಕೆಟ್‌ನ (ಎಸ್‌ಎಲ್‌ಸಿ) ಹಿರಿಯ ಅಧಿಕಾರಿಯೊಬ್ಬರು, “ಅವರ ಷರತ್ತುಗಳನ್ನು ನಾವು ಒಪ್ಪಲು ಸಾಧ್ಯವಿಲ್ಲ, ಆದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆಂದು” ಹೇಳಿದ್ದಾರೆ.  ಎಸ್‌ಎಲ್‌ಸಿ ಹೇಳಿಕೆಯಲ್ಲಿ, “ಆರ್ಥಿಕತೆಯಿಂದ   ಪ್ರಪಂಚದಾದ್ಯಂತ ಬಿಕ್ಕಟ್ಟು ತಲೆದೋರಿರುವುದನ್ನು ನೋಡಿದ್ದರೂ   ವಾಸ್ ವೈಯುಕ್ತಿಕ ಆರ್ಥಿಕ ಲಾಭಕ್ಕಾಗಿ ತಂಡವು ನಿರ್ಗಮಿಸುವ ಮುನ್ನಾದಿನ ಹಠಾತ್ ಮತ್ತು ಅಂತಹ ಬೇಜವಾಬ್ದಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆಂದು ಹೇಳಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತೀಚೆಗೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ತಂಡದ ಕಳಪೆ ಪ್ರದರ್ಶನದ ನಂತರ, ಕಳೆದ ವಾರ ಆಸ್ಟ್ರೇಲಿಯಾದ ಡೇವಿಡ್ ಸೆಕರ್ ಬದಲಿಗೆ ವಾಸ್ ಅವರನ್ನು ಶ್ರೀಲಂಕಾದ ವೇಗದ ಬೌಲಿಂಗ್ ತರಬೇತುದಾರರಾಗಿ ನೇಮಿಸಲಾಗಿತ್ತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: