ದೇಶಪ್ರಮುಖ ಸುದ್ದಿ

ಉತ್ತರಾಖಂಡ್ ನಲ್ಲಿನ ಹಿಮಸ್ಫೋಟ ದುರಂತ: ಕಣ್ಮರೆಯಾಗಿದ್ದ 136 ಜನರೂ ಮೃತ; ಸರ್ಕಾರ ಘೋಷಣೆ

ಡೆಹರಾಡೂನ್,ಫೆ.23- ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಬಂಡೆ ಸ್ಫೋಟದಿಂದ ಉಂಟಾದ ಪ್ರವಾಹ ದುರಂತದಲ್ಲಿ ಕಣ್ಮರೆಯಾಗಿದ್ದ 136 ಜನರೂ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡ್ ಸರ್ಕಾರ ಹೇಳಿದೆ.

ಫೆ.8 ರಂದು ಸಂಭವಿಸಿದ ದುರಂತದಲ್ಲಿ ಇದುವರೆಗೆ 61 ಮಂದಿ ಮೃತಪಟ್ಟಿದ್ದರು. ಇದೀಗ ಕಣ್ಮರೆಯಾಗಿದ್ದ 136 ಮಂದಿಯೂ ಮೃತಪಟ್ಟಿದ್ದಾರೆ ಎಂದು ಸರ್ಕಾರ ಘೋಷಿಸಿರುವುದರಿಂದ ದುರಂತದಲ್ಲಿ ಒಟ್ಟು 196 ಜನ ಮೃತಪಟ್ಟಂತಾಗಿದೆ.

ದುರಂತ ನಂತರ ಎನ್​ಡಿಆರ್​ಎಫ್ ತಂಡ ಸ್ಥಳದಲ್ಲಿ ಬೀಡು ಬಿಟ್ಟು ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಕಾರ್ಯಾಚರಣೆಯಲ್ಲಿ 61 ಶವಗಳು ಮಾತ್ರ ದೊರಕಿದ್ದವು. 136 ಮಂದಿ ಕಣ್ಮರೆಯಾಗಿದ್ದರು. ಇದೀಗ ಅವರೂ ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳಿದೆ.

ಫೆ 8 ರಂದು ಚಮೋಲಿ ಜಿಲ್ಲೆಯ ದೌಲಿಗಂಗಾ ಬಳಿ ಹಿಮಬಂಡೆ ಸ್ಪೋಟಗೊಂಡ ಪರಿಣಾಮ ದೌಲಿಗಂಗಾ, ಅಲಕಾನಂದ ನದಿಯಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಗಿತ್ತು. ನದಿ ಕಣಿವೆಯಲ್ಲಿ ಕೆಲಸ ಮಾಡುತ್ತಿದ್ದ 196 ಜನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಸತ್ತವರ ಶವಗಳಿಗಾಗಿ ಹುಡುಕಾಟ ಮುಂದುವರೆದಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: