ಸುದ್ದಿ ಸಂಕ್ಷಿಪ್ತ

ಗುರುವಂದನಾ ಕಾರ್ಯಕ್ರಮ

ಮೈಸೂರಿನ ಜೆ.ಎಸ್.ಎಸ್. ನಗರದ ಸಮಾನ ಮನಸ್ಕರಿಂದ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮಿಗಳ 110ನೇ ವರ್ಷದ ಗುರುವಂದನಾ ಕಾರ್ಯಕ್ರಮವನ್ನು ಏ.20ರ ಗುರುವಾರ ಬೆಳಿಗ್ಗೆ 10ಕ್ಕೆ ರಾಜಕುಮಾರ್ ರಸ್ತೆಯ ಜೆ.ಎಸ್.ಎಸ್.ನಗರದ ಬಸ್ ನಿಲ್ದಾಣದ ಪಕ್ಕದ ಆವರಣದಲ್ಲಿ ಆಯೋಜಿಸಲಾಗಿದೆ. ಸುತ್ತೂರು ಕ್ಷೇತದ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸುವರು, ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮಿಗಳು ಉದ್ಘಾಟಿಸುವರು. ಸಂಜೆ 5ಕ್ಕೆ ಉಮಾಮಹೇಶ್ವರ ನೃತ್ಯಕಲಾ ಶಾಲೆ ವಿದ್ಯಾರ್ಥಿಗಳಿಂದ ದಕ್ಷ ಯಜ್ಞ ನೃತ್ಯ ರೂಪಕ ಹಾಗೂ ಪ್ರೊ.ಎಂ.ಕೃಷ್ಣೇಗೌಡ ಮತ್ತು ತಂಡದಿಂದ ನಗೆಸುಗ್ಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Leave a Reply

comments

Related Articles

error: