ಪ್ರಮುಖ ಸುದ್ದಿವಿದೇಶ

ಕೋವಿಡ್ ನಿಂದ ಅಮೆರಿಕದಲ್ಲಿ 5 ಲಕ್ಷ ಸಾವು: ಇದು 3 ಮಹಾಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮ

ವಾಷಿಂಗ್ಟನ್‌,ಫೆ.23-ಅಮೆರಿಕದಲ್ಲಿ ‘ಕೋವಿಡ್‌ 19’ ಸಾಂಕ್ರಾಮಿಕದಿಂದ ಸತ್ತವರ ಸಂಖ್ಯೆ 5 ಲಕ್ಷ ತಲುಪಿದ್ದು, ಇದು ಮೂರು ಮಹಾಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆಗೆ ಸಮನಾಗಿದೆ.

ಕೋವಿಡ್‌ನಿಂದ ಮೃತಪಟ್ಟವರಿಗೆ ಗೌರವಸಲ್ಲಿಸುವುದಕ್ಕಾಗಿ ಶ್ವೇತಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ‘ಮೋಂಬತ್ತಿ ಬೆಳಗುವ’ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರ ಸಾವು ವಿಶ್ವದ ಒಂದನೇ ಮಹಾಯುದ್ಧ, ಎರಡನೇ ಮಹಾಯುದ್ಧ ಹಾಗೂ ವಿಯೆಟ್ನಾಂ ಯುದ್ಧದಲ್ಲಿ ಸತ್ತ ಅಮೆರಿಕನ್ನರ ಸಂಖ್ಯೆಗೆ ಇದು ಸಮನಾಗಿದೆ. ಎರಡನೇ ಮಹಾಯುದ್ಧದಲ್ಲಿ 4,05,000, ವಿಯೆಟ್ನಾಂ ಯುದ್ಧದಲ್ಲಿ 58 ಸಾವಿರ ಮತ್ತು ಕೊರಿಯನ್ ಯುದ್ಧದಲ್ಲಿ 36 ಸಾವಿರ ಮಂದಿ ಅಮೆರಿಕನ್ನರು ಸಾವನ್ನಪ್ಪಿದ್ದಾರೆ ಎಂದರು.

ಒಂದು ದೇಶವಾಗಿ, ಇಂಥ ಕ್ರೂರವಾದ ಘಟನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನಾವು ಇನ್ನೂ ಕಠಿಣವಾಗಿ ಈ ರೋಗದ ವಿರುದ್ಧ ಹೋರಾಡುತ್ತೇವೆ. ನಾವು ದುಃಖಕ್ಕೆ ಜಗ್ಗಬಾರದು. ಅಂಕಿ ಅಂಶಗಳೊಂದಿಗೆ ಜೀವನ ನೋಡುವುದನ್ನು ವಿರೋಧಿಸಬೇಕು ಎಂದರು.

ಕೋವಿಡ್‌ನಿಂದ ಅಮೆರಿಕದಲ್ಲಿ 5,00,071 ಮಂದಿ ಸತ್ತಿದ್ದಾರೆ. ಇದೊಂದು ಹೃದಯವಿದ್ರಾಕವಾದ ಮೈಲಿಗಲ್ಲು, 2.81 ಕೋಟಿಗೂ ಹೆಚ್ಚು ಅಮೆರಿಕನ್ನರು ಸೋಂಕಿಗೆ ಒಳಗಾಗಿದ್ದಾರೆ. ಇದು ಮತ್ತೊಂದು ಜಾಗತಿಕ ದಾಖಲೆ ಎಂದ ಅವರು, ದೇಶದಲ್ಲಿ ರಾಜಕೀಯ ಮಾಡುತ್ತಾ, ಸುಳ್ಳು ಸುದ್ದಿ ನೀಡುತ್ತಾ ಕುಟುಂಬಗಳು, ಸಮುದಾಯಗಳನ್ನು ಒಡೆಯುವ ಪ್ರಯತ್ನವನ್ನು ನಿಲ್ಲಿಸಬೇಕು. ಈ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಬಹಳ ಜನರು ಸಾವನ್ನಪ್ಪಿದ್ದಾರೆ. ಸತ್ತಿರುವವರು ಡೆಮಾಕ್ರಿಟಿಕ್ ಪಕ್ಷದವರಲ್ಲ ಹಾಗೂ ರಿಪಬ್ಲಿಕನ್ನರೂ ಅಲ್ಲ. ಅವರೆಲ್ಲ ಅಮೆರಿಕದ ನಾಗರಿಕರು ಎಂದಿದ್ದಾರೆ.

ಶ್ವೇತಭವನದ ಹೊರಗೆ 500ಕ್ಕೂ ಹೆಚ್ಚು ಮೇಣದ ಬತ್ತಿಗಳನ್ನು ಹಚ್ಚಲಾಯಿತು. ನಂತರ ನಡೆದ ‘ಮೌನಾಚರಣೆ’ಯಲ್ಲಿ ಬೈಡನ್ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಪತಿ ಡೌಗ್ ಎಮ್ಹಾಪ್‌ ಅವರೊಂದಿಗೆ ಪಾಲ್ಗೊಂಡರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: