
ಪ್ರಮುಖ ಸುದ್ದಿಮೈಸೂರು
ಮೈಸೂರು ಪಾಲಿಕೆ ಮೇಯರ್ ಚುನಾವಣೆ; ಜೆಡಿಎಸ್-ಬಿಜೆಪಿ ಮೈತ್ರಿಯ ಸುಳಿವು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ
ಮೈಸೂರು,ಫೆ.23:- ನಾಳೆ ಮೈಸೂರು ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಜೆಡಿಎಸ್ ಬಿಜೆಪಿ ಮೈತ್ರಿ ಸುಳಿವು ನೀಡಿದರು.
ಮೈಸೂರಿನಲ್ಲಿಂದು ಮಾತನಾಡಿದ ಅವರು ಸಿದ್ದರಾಮಯ್ಯನವರು ಜೆಡಿಎಸ್ ಒಂದು ಪಕ್ಷವೇ ಅಲ್ಲ ಅಂತಾರೆ. ನಮ್ಮ ಪಕ್ಷದ ಬಗ್ಗೆ ತುಚ್ಚವಾಗಿ ಮಾತನಾಡುವವರ ಜೊತೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕು. ಹಿಂದೆ ಮೈತ್ರಿ ಆದಾಗ ದೆಹಲಿ ಮಟ್ಟದ ನಾಯಕರು ಮಾತುಕತೆ ನಡೆಸಿದ್ದರು. ಈಗ ನಿಮ್ಮ ಸಹಕಾರ ಬೇಕೆಂದು ಈವರೆಗೂ ಮೇಲ್ಮಟ್ಟದ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿಲ್ಲ ಎಂದರು.
ಚಿಕ್ಕಬಳ್ಳಾಪುರದಲ್ಲಿ ಜಿಲಿಟಿನ್ ಸ್ಪೋಟ ಪ್ರಕರಣಕ್ಕೆಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಇದು ಪೊಲೀಸ್ ಇಲಾಖೆ ವೈಫಲ್ಯ ಅಲ್ಲ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತಿರುವವರ ವೈಫಲ್ಯ. ನಾನು ಸಾಕಷ್ಟು ಮಾಹಿತಿಯನ್ನು ಇಟ್ಟುಕೊಂಡಿದ್ದೇನೆ. ಸಮಯ ಬಂದಾಗ ಅದೆಲ್ಲವನ್ನು ಹೇಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದರು. ಸರ್ಕಾರ ಹೇಗೆ ನಡೆಯುತ್ತೆ ಹಾಗೆ ಅಧಿಕಾರಿಗಳು ಸಹ ಹಾಗೆ ನಡೆದುಕೊಳ್ತಾರೆ. ಅಕ್ರಮ ಇರೋದು ಸಕ್ರಮ ಮಾಡ್ತೀವಿ ಅಂದ್ರು ಸಿಎಂ. ಗಣಿಗಾರಿಕೆಯಲ್ಲಿ ಸಣ್ಣ ಪುಟ್ಟದ ಗಾಯಗೊಂಡ ಘಟನೆ ಬೆಳಕಿಗೆ ಬರೋದಿಲ್ಲ. ಗಣಿಗಾರಿಕೆ ಮಾಲೀಕರು, ಪೊಲೀಸರು ಅಲ್ಲೆ ಅದನ್ನು ಬಿಟ್ಟು ಬಿಡುತ್ತಾರೆ. ದೊಡ್ಡ ಮಟ್ಟದಲ್ಲಿ ಆದಾಗ ಹೇಳಿಕೆ ಕೊಡ್ತಾರೆ, ನಂತರ ಮತ್ತೆ ಗಣಿಗಾರಿಕೆ ಮುಂದುವರೆಸುತ್ತಾರೆ. ಇದರಲ್ಲಿ ಜನಪ್ರತಿನಿಧಿಗಳ ಪಾತ್ರವೇ ಹೆಚ್ಚಾಗಿದೆ. ಇದರಲ್ಲಿ ಆ ಪಕ್ಷ ಈ ಪಕ್ಷ ಅಂತ ಏನಿಲ್ಲ. ಜಿಲಿಟಿನ್ ವಿಚಾರದಲ್ಲಿ ಇದು ಎರಡನೇ ದೊಡ್ಡ ಪ್ರಕರಣ. ಜಿಲಿಟಿನ್ನಲ್ಲಿ ಪೌಡರ್ ಹಾಕುವಂತದ್ದರಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ನಡೆಯುತ್ತಿರುವ ಅಕ್ರಮ ಸರಿಯಾಗಬೇಕಾದರೆ. ಸರಿಯಾದ ನಿರ್ಣಯ ರಾಜ್ಯ ಸರ್ಕಾರ ಕೈಗೊಳ್ಳಬೇಕು. ಶಾಸಕರು, ಸಚಿವರು, ಒತ್ತಡ ಹಾಕಿ ಈ ಸಮಸ್ಯೆ ಆಗುತ್ತಿದೆ. ಹಣಕ್ಕಾಗಿ ಎಲ್ಲವನ್ನು ಮಾಡುವುದಲ್ಲ. ಮೊದಲ ಬಡವರ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಈ ಘಟನೆಗಳನ್ನು ನೋಡ್ತಿದ್ರೆ ಇನ್ನು ಎಷ್ಟು ಜೀವಗಳಿಗೆ ಸಮಸ್ಯೆ ಆಗತ್ತೋ? ಏನೋ? ಎನ್ನುವ ಮೂಲಕ ಜಿಲಿಟಿನ್ ಸ್ಪೋಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆರು. ಸಣ್ಣಪುಟ್ಟವರು ಮಾತನಾಡಿದ್ರೆ ಪ್ರಯೋಜನ ಇಲ್ಲ. ಬಿಜೆಪಿ ನಾಯಕರು ಸಂಪರ್ಕ ಮಾಡಿರುವುದು ನಿಜ. ಖುದ್ದು ಸಿಎಂ ಬಿಎಸ್ವೈ ದೂರವಾಣಿ ಮೂಲಕ ಮಾತನಾಡಿದ್ದಾರೆ. ಆದರೆ ಸಿದ್ದರಾಮಯ್ಯ ಈಗಲೇ ಸಿಎಂ ಆಗಿದ್ದೀನಿ ಎಂಬ ಕನಸು ಕಾಣ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನಲ್ಲಿ ಹಿಂದೆ ಇದ್ದ ಸಂಸ್ಕೃತಿಯೇ ಬೇರೆ. ಸಿದ್ದರಾಮಯ್ಯ ಹೋದ ಮೇಲೆ ಇರುವ ಸಂಸ್ಕೃತಿಯೇ ಬೇರೆ. ಅವರ ನಡವಳಿಕೆಗಳು, ಅಗೌರವದ ಮಾತುಗಳು ಎಲ್ಲವನ್ನೂ ನೋಡ್ತಿದ್ದೀನಿ ಎಂದರು.
ಮೈಸೂರು ಪಾಲಿಕೆ ಮೈತ್ರಿ ಇಡೀ ರಾಜ್ಯಕ್ಕೆ ಸಂದೇಶ ಕೊಡುತ್ತೆ. ಮುಂದಿನ 2023 ಕ್ಕೆ ಜೆಡಿಎಸ್ನ ನಿಲುವು ಏನೆಂದು ಚಾಮುಂಡೇಶ್ವರಿ ಸನ್ನಿಧಿಯಿಂದಲೇ ರವಾನೆ ಆಗುತ್ತೆ. ಹಿಂದುತ್ವ, ಹಿಂದ, ಅಹಿಂದ ಎಲ್ಲ ಸಿದ್ದರಾಮಯ್ಯ ಅವರ ದೊಂಬರಾಟ. ಇವೆಲ್ಲ ಅಧಿಕಾರ ಪಡೆಯಲಿಕ್ಕಷ್ಟೆ, ಜನಪರ ಕಾಳಜಿ ಇಲ್ಲ. ನಾವು ಇವೆಲ್ಲ ಬಿಟ್ಟು ನೆಲಜಲ ರೈತರ ಪರ ಹೋರಾಡುತ್ತೇವೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)