ಕರ್ನಾಟಕಪ್ರಮುಖ ಸುದ್ದಿ

ಅಧಿಕಾರಿಗಳ ಕಿರುಕುಳ : ಮದ್ದೂರಿನಲ್ಲಿ ಪೌರಕಾರ್ಮಿಕ ಆತ್ಮಹತ್ಯೆ

ರಾಜ್ಯ(ಮಂಡ್ಯ)ಫೆ.23:- ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಮಲ ಸ್ವಚ್ಛ ಗೊಳಿಸಿದ್ದ ಪ್ರಕರಣದಲ್ಲಿ ಬಲಿಪಶುವಾಗಿದ್ದ ಮದ್ದೂರಿನ ಪೌರಕಾರ್ಮಿಕ ನಾರಯಣ ಪುರಸಭೆ ಅಧಿಕಾರಿಗಳ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆಲದಿನಗಳ ಹಿಂದೆ ಪೌರಕಾರ್ಮಿಕ ನಾರಯಣ್ ರನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಛ ಗೊಳಿಸಿದ್ದರು. ನಂತರ ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಪ್ರಕರಣ ಮಾಧ್ಯಮಗಳಲ್ಲಿ ಸೋರಿಕೆಯಾಗಲು ಪುರಸಭೆಯ ಹೊರಗುತ್ತಿಗೆ ವಾಹನ ಚಾಲಕ ಕಾರ್ಮಿಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಕಾರಣರೆಂದು ಶ್ರೀನಿವಾಸ್ ರನ್ನು ಕೆಲಸದಿಂದ ಏಕಾಏಕೀ ಕೈ ಬಿಡಲಾಗಿತ್ತು. ಈ ಸಂಬಂಧ ಹೊರಗುತ್ತಿಗೆ ವಾಹನ ಚಾಲಕರ ಸಂಘಟನೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ತಂದಿತ್ತು.
ಇದರಿಂದ ಕೆರಳಿದ ಅಧಿಕಾರಿಗಳು ಖಾಯಂ ಪೌರಕಾರ್ಮಿಕ ನಾರಾಯಣ್ ರನ್ನು ಬೆದರಿಸಿ ತಾನೇ ಸ್ವಯಂ ಆಗಿ ಮ್ಯಾನ್ ಹೋಲ್ ಗೆ ಇಳಿದಿದ್ದಾಗಿ ಹೇಳಿಕೆ ನೀಡುವಂತೆ ಬೆದರಿಸಿದ್ದರು. ಅಧಿಕಾರಿಗಳ ಕಿರುಕುಳಕ್ಕೆ ಅಂಜಿದ ಪೌರಕಾರ್ಮಿಕ ನಾರಯಣ್ ತನ್ನ ಸಾವಿಗೆ ಮುಖ್ಯಾಧಿಕಾರಿ ಮುರುಗೇಶ್. ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಹಾಗೂ ಇತರರು ಕಾರಣರೆಂದು ಪತ್ರ ಬರೆದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ಕೆ,ಎಸ್,ಎಸ್.ಎಚ್)

Leave a Reply

comments

Related Articles

error: