ಮೈಸೂರು

ಚಾಮುಂಡಿಬೆಟ್ಟದಲ್ಲಿ `ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಮೈಸೂರು. ಫೆ .23:- ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು 2021ರ ಮಾರ್ಚ್ 15 ಮತ್ತು ಜೂನ್ 17 ರಂದು ಆಯೋಜಿಸಲಾಗಿದೆ ಎಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.
ವಿವರಗಳು ಇಂತಿವೆ
ಮಾರ್ಚ್ 15ರಂದು ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯದಲ್ಲಿ ವಿವಾಹ ನಡೆಯಲಿದೆ. ವಿವಾಹಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಫೆಬ್ರವರಿ 28 ಕಡೆಯದಿನವಾಗಿರುತ್ತದೆ.
ಹೆಸರು ನೋಂದಾಯಿಸಿಕೊಂಡ ವಧು ವರರ ವಿವರಗಳನ್ನು ದೇವಾಲಯದಲ್ಲಿ ಮಾರ್ಚ್ 5 ರಂದು ಪ್ರಕಟಿಸಲಾಗುವುದು. ವಧು ವರರ ಪಟ್ಟಿಗೆ ಮಾರ್ಚ್ 10ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.ಮಾರ್ಚ್ 12 ರಂದು ಅಂತಿಮ ವಧು ವರರ ಪಟ್ಟಿ ಪ್ರಕಟಿಸಲಾಗುವುದು.
ಜೂನ್ 17 ರಂದು ನಡೆಯುವ ಸರಳ ಸಾಮೂಹಿಕ ವಿವಾಹಕ್ಕೆ ಬೆಳಗ್ಗೆ 11 ರಿಂದ 12 ರವರೆಗೆ ಅಭಿಜಿನ್ ಲಗ್ನ ಮುಹೂರ್ತದ ಸಮಯವನ್ನು ನಿಗದಿಪಡಿಸಲಾಗಿದ್ದು, ಮೇ 31ರೊಳಗೆ ವಧು ವರರು ಹೆಸರು ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಿಕೊಂಡ ವಧು ವರರ ವಿವರಗಳನ್ನು ದೇವಾಲಯದಲ್ಲಿ ಜೂನ್ 3 ರಂದು ಪ್ರಕಟಿಸಲಾಗುವುದು. ವಧು ವರರ ಪಟ್ಟಿಗೆ ಜೂನ್ 10ರೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಜೂನ್13 ರಂದು ಅಂತಿಮ ವಧು ವರರ ಪಟ್ಟಿ ಪ್ರಕಟಿಸಲಾಗುವುದು.
ವರನ ಪ್ರೋತ್ಸಾಹಧನಕ್ಕೆ(ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶುಲ್ಕಕ್ಕಾಗಿ) 5,000 ರೂ. ವಧುವಿಗೆ (ಹೂವಿನಹಾರ, ಧಾರೆ ಸೀರೆ, ರವಿಕೆ ಕಣಕ್ಕಾಗಿ) 10,000 ರೂ. ಮತ್ತು ವಧುವಿಗೆ ಚಿನ್ನದ ತಾಳಿ, ಎರಡು ಗುಂಡುಗಳಿಗಾಗಿ 40,000 ರೂ. ಗಳಂತೆ ಒಟ್ಟು 55,000ರೂ. ಗಳನ್ನು ನೀಡಲಾಗುವುದು.
ಆಸಕ್ತರು ಇಲಾಖೆಯಿಂದ ವಿಧಿಸಲಾದ ಷರತ್ತುಗಳ ಹಾಗೂ ಒದಗಿಸಬೇಕಾದ ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಕಚೇರಿ ದೂ.ಸಂ-0821-2590027, 2590082 ಅಥವಾ ಮೊ.ಸಂ-99802349947, 9986393838 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: