ಮೈಸೂರು

ನಾಳೆ ವಿದ್ಯುತ್ ನಿಲುಗಡೆ

ಮೈಸೂರು,ಫೆ .23 :-ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ವತಿಯಿಂದ 66/11 ಕೆ.ವಿ ಆಯರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 24 ರಂದು 4ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕೇಗೌಡನಹುಂಡಿ, ದೇವಲಾಪುರ, ರಾಯನಹುಂಡಿ, ಆಯರಹಳ್ಳಿ, ಮರಿಗೌಡನಹುಂಡಿ, ಕುಂಬ್ರಹಳ್ಳಿ, ಕುಂಬ್ರಹಳ್ಳಿ ಮಠ, ಸೋಮೇಶ್ವರಪುರ, ಬಸಹಳ್ಳಿಹುಂಡಿ, ಕಿರಾಳು, ಹದಿನಾರು, ಹದಿನಾರು ಮೊಳೆ, ಮೂಡಳ್ಳಿ, ಮಲ್ಲರಾಜಹುಂಡಿ, ಭರಣಿ ಕುಡಿಯುವ ನೀರಿನ ಸ್ಥಾವರ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಗ್ಗೆ 10 ರಿಂದ 5 ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನ.ರಾ.ಮೊಹಲ್ಲಾದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: