ಮೈಸೂರು

ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬಲೊರೋ ವಾಹನ ವಶಕ್ಕೆ

ಮೈಸೂರು,ಫೆ.23:-  ಇಂದು  ಅಡಿಶನಲ್ ಎಸ್ಪಿ ಶಿವಕುಮಾರ್ ಅವರು ಕಾಮಾನಕೆರೆ ಹುಂಡಿ ಹತ್ತಿರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬಲೊರೋ ವಾಹನ ವಶಕ್ಕೆ ಪಡೆದಿದ್ದಾರೆ.

ಕೆಎ -11 -B-1588 ಬಲೋರೋ ಗಾಡಿಯಲ್ಲಿ ಅಕ್ರಮ ಮರಳು ಸಾಗಣೆಕೆ ಮಾಡಲಾಗುತ್ತಿತ್ತು. ಚಾಲಕನನ್ನು ವಿಚಾರಣೆ ಮಾಡಿದ ಶಿವಕುಮಾರ್ ರವರು ವಾಹನವನ್ನು ವಶಕ್ಕೆ ಪಡೆದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮ ಮರಳು ಸಾಗಣಿಕೆ ದಾಳಿಯಲ್ಲಿ ಡಿವೈ,ಎಸ್.ಪಿ ಸುಮೀತ್ ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ, ರಾಮ್ ಪ್ರಸಾದ್ ಭಾಗವಹಿಸಿದ್ದರು. ( ಕೆ.ಎಸ್,ಎಸ್.ಎಚ್)

Leave a Reply

comments

Related Articles

error: