ಮೈಸೂರು

ಶ್ರೀ ನಟರಾಜ ಪ್ರತಿಷ್ಠಾನ ವತಿಯಿಂದ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ಕಾರ್ಯಕ್ರಮ

ಮೈಸೂರು,ಫೆ.23:- ಶ್ರೀ ನಟರಾಜ ಪ್ರತಿಷ್ಠಾನ ಮತ್ತು ಅಗ್ನಿ ಶಾಮಕ ಠಾಣೆ, ಸರಸ್ವತಿಪುರಂ ಇವರ ಸಹಯೋಗದೊಂದಿಗೆ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ರಾಜು. ಎಚ್. ಮತ್ತವರ ತಂಡದವರು ಒಡಗೂಡಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬೆಂಕಿ ಅನಾಹುತಗಳು ಉಂಟಾದಂತಹ ಸಂದರ್ಭದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸವಿವರವಾಗಿ ವಿವರಿಸಿದರು.
ಅಂತೆಯೇ ಮಕ್ಕಳಿಂದಲೇ ಸ್ವತಃ ಬೆಂಕಿ ನಂದಿಸುವಂತಹ ಕಾರ್ಯವನ್ನು ಮಾಡಿದರು. ಇದರಿಂದ ಮಕ್ಕಳಲ್ಲಿ ಹೆಚ್ಚು ಜಾಗೃತಿ ಉಂಟಾಯಿತು. ಕಾರ್ಯಕ್ರಮದಲ್ಲಿ ಡಾ. ಶಾರದ. ಎಂ., ಪ್ರಾಂಶುಪಾಲರು, ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ಇವರು ಅಧ್ಯಕ್ಷತೆ ವಹಿಸಿದ್ದರು. ಸತ್ಯ ಸುಲೋಚನ. ಎಸ್. ಎಂ., ಪ್ರಾಂಶುಪಾಲರು, ಶ್ರೀ ನಟರಾಜ ಪಬ್ಲಿಕ್ ಸ್ಕೂಲ್, ಇವರು ಉಪಸ್ಥಿತರಿದ್ದರು. ನಾಗರಾಜ ಅರಸ್, ಅಗ್ನಿಶಾಮಕ ಅಧಿಕಾರಿಗಳು ಇವರು ಉಪಸ್ಥಿತರಿದ್ದರು. ಸುನೀತಾರಾಣಿ. ವಿ. ಡಿ., ಪ್ರಾಂಶುಪಾಲರು, ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು, ಮೈಸೂರು ಇವರು ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದರು. ರವಣಿಕರ್. ಹೆಚ್. ಎಂ., ದೈಹಿಕ ಶಿಕ್ಷಕರು, ಶ್ರೀ ನಟರಾಜ ಪಬ್ಲಿಕ್ ಸ್ಕೂಲ್ ವಂದಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: