ಮೈಸೂರು

ಆಹಾರ ಪದಾರ್ಥಗಳಲ್ಲಿನ ಕಲಬೆರಕೆ ಹೇಗೆ ಕಂಡು ಹಿಡಿಯುವುದು : ಚಿಣ್ಣರಿಗೆ ಮನವರಿಕೆ ಮಾಡಿದ ಸಿ.ವಿ.ನಾಗರಾಜು

ಬೆಣ್ಣೆಗೆ ಮೈದಾ, ಮೆಣಸಿಗೆ ಪರಂಗಿ ಹಣ್ಣಿನ ಬೀಜ, ರವೆಗೆ ಕಬ್ಬಿಣ ಹೀಗೆ ಆಹಾರ ಪದಾರ್ಥಗಳಲ್ಲಿನ ಕಲಬೆರಕೆ ಹಾಗೂ ಅದನ್ನು ಕಂಡುಹಿಡಿಯುವ ವಿಧಾನವನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿ ಕೊಡಲಾಯಿತು.

ಮೈಸೂರಿನ ಕಲಾಮಂದಿರದ ವನರಂಗದಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಚಿಣ್ಣರ ಮೇಳದಲ್ಲಿ ಬುಧವಾರ ಆಹಾರ ಪದಾರ್ಥಗಳ ಬಗೆಗೆ ಅರಿವು ಮೂಡಿಸಲಾಯಿತು. ಮೈಸೂರು ಗ್ರಾಹಕ ಪರಿಷತ್‍ನ ಸಂಚಾಲಕ ಸಿ.ವಿ.ನಾಗರಾಜು ಸ್ವತಃ ಮಕ್ಕಳ ಕೈಯಲ್ಲಿ ಆಹಾರ ಪದಾರ್ಥಗಳ ಕಲಬೆರಕೆಯನ್ನು ಕಂಡುಹಿಡಿಯುವ ಪ್ರಾತ್ಯಕ್ಷಿಕೆ ಮಾಡಿಸಿ ಅರಿವು ಮೂಡಿಸಿದರು. ಇಂದು ನಾವು ಉಪಯೋಗಿಸುವ ಪ್ರತಿಯೊಂದು ವಸ್ತುವೂ ಕಲಬೆರಕೆಯಾಗಿದ್ದು ಅವುಗಳನ್ನು ಕೊಳ್ಳುವಾಗ ಜಾಗರೂಕತೆ ವಹಿಸಬೇಕು. ಹಾಲು, ಬೆಣ್ಣೆ, ತುಪ್ಪ, ಟೀ ಪುಡಿ, ಗಸಗಸೆ, ಬೇಳೆಕಾಳು, ಎಣ್ಣೆ ಸೇರಿದಂತೆ ಎಲ್ಲವೂ ಕಲಬೆರಕೆಯಾಗಿದ್ದು ಅವುಗಳನ್ನು ಬಳಸುವ ಮೊದಲು ಕಲಬೆರಕೆಯಾಗಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರ ಬಳಸಬೇಕು. ಜತೆಗೆ ಪದಾರ್ಥಗಳನ್ನು ಕೊಂಡುಕೊಳ್ಳುವಾಗ ರಶೀದಿ ಪಡೆಯಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಗುಣಮಟ್ಟವಿಲ್ಲದ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೆಡಿಕಲ್ ಶಾಪ್‍ನಲ್ಲಿ ಕ್ಲೋರಿಕ್ ಆಮ್ಲ ಹಾಗೂ ಸಲ್ಪರಿಕ್ ಲಭ್ಯವಿದ್ದು ಅವುಗಳನ್ನು ತಂದು ಆಹಾರ ಪದಾರ್ಥಗಳ ಕಲಬೆರಕೆಯನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕ ಮೈಮ್ ರಮೇಶ್ ಸೇರಿದಂತೆ  ನಾಲ್ಕೂರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: