ಕ್ರೀಡೆಪ್ರಮುಖ ಸುದ್ದಿವಿದೇಶ

ಕಾರು ಅಪಘಾತ: ಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್ ಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಕ್ಯಾಲಿಫೋರ್ನಿಯಾ,ಫೆ.24-ಕಾರು ಅಪಘಾತದಲ್ಲಿ ಪ್ರಖ್ಯಾತ ಗಾಲ್ಫ್​ ಆಟಗಾರ ಟೈಗರ್​ ವುಡ್ಸ್​ (45) ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಈ ಬಗ್ಗೆ ಲಾಸ್​ ಏಂಜಲಿಸ್​ನ ಕೌಂಟಿ ಶೆರಿಫ್ಸ್​ ಇಲಾಖೆ ಮಾಹಿತಿ ನೀಡಿದೆ. ಅಪಘಾತದಲ್ಲಿ ವುಡ್ಸ್ ಅವರ ಕಾರು ಸಂಪೂರ್ಣ ಹಾನಿಯಾಗಿದೆ. ವುಡ್ಸ್ ಕಾರು ಬ್ಲ್ಯಾಕ್‌ಹಾರ್ಸ್ ರಸ್ತೆಯಲ್ಲಿರುವ ಹಾಥಾರ್ನ್ ಬೌಲೆವಾರ್ಡ್‌ನಲ್ಲಿ ಉತ್ತರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಲಾಸ್ ಏಂಜಲೀಸ್ ಕೌಂಟಿಯ ಅಗ್ನಿಶಾಮಕ ದಳ ಮತ್ತು ಅರೆವೈದ್ಯರು ವುಡ್ಸ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದರು. ಆ ಬಳಿಕ ಗಾಯಾಳು ವುಡ್ಸ್​ರನ್ನು ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕೌಂಟಿ ಶೆರಿಫ್​ ಇಲಾಖೆ ಹೇಳಿದೆ.

ವುಡ್ಸ್ ಅವರ ಏಜೆಂಟ್ ಮಾರ್ಕ್ ಸ್ಟೈನ್​ಬರ್ಗ್ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ವುಡ್ಸ್ ಅವರು ಕಾಲಿಗೆ ಅನೇಕ ಗಾಯಗಳಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದಿದ್ದಾರೆ.

ವುಡ್ಸ್ ಅವರು ಕಾರು ಅಪಘಾತದಲ್ಲಿ ಸಿಲುಕಿರುವುದು ಇದು ಮೂರನೇ ಬಾರಿ. 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು. ಅಂದು ಎಸ್​ಯುವಿ ಕಾರು ಮರಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ವುಡ್ಸ್​ ಅನೇಕ ಮಹಿಳೆಯರೊಂದಿಗೆ ಸಂಬಂಧವಿದೆ ಮತ್ತು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಷಯು ಬಹಿರಂಗವಾಗಿತ್ತು. (ಏಜೆನ್ಸೀಸ್​, ಎಂ.ಎನ್)

 

Leave a Reply

comments

Related Articles

error: